ಕಂಪೆನಿಗಳ ಪರಿಹಾರ: ಟೆಲಿಕಾಂ ಆಯೋಗದ ನಿರ್ಧಾರಕ್ಕೆ ಜಿಯೋ ವಿರೋಧ

ಹೊಸದಿಲ್ಲಿ: ಟೆಲಿಕಾಂ ಕಂಪೆನಿಗಳ ಸಂಕಷ್ಟಕ್ಕೆ ನೆರವಾಗುವಂತೆ ಟೆಲಿಕಾಂ ಆಯೋಗವೊಂದು ಆಂತರಿಕ ಸಚಿವರ ತಂಡಕ್ಕೆ ವರದಿ ಮಾಡಿದೆ. ಆದರೆ, ಈ ಒಂದು ಕ್ರಮಕ್ಕೆ ರಿಲಯನ್ಸ್ ಜಿಯೋ ವಿರೋಧ ವ್ಯಕ್ತಪಡಿಸಿದೆ.
ಟೆಲಿಕಾಂ ಕಂಪೆನಿಗಳು ದೊಡ್ಡ ಮಟ್ಟದ ಸಾಲದ ಸುಳಿಯಲ್ಲಿ ಸಿಲುಕಿಕೊಂಡಿದ್ದಲ್ಲದೇ ಅವುಗಳ ಆದಾಯವೂ ಕುಂಠಿತವಾಗುತ್ತಿದ್ದು, ಟೆಲಿಕಾಂ ವಲಯದ ಭವಿಷ್ಯದ ಹಿತದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ಹೆಚ್ಚಿನ ಮತ್ತು ತಕ್ಷಣದ ಪರಿಹಾರಕ್ಕೆ ಕ್ರಮಗಳನ್ನು ಸೂಚಿಸಿ ಎಂದು ಟೆಲಿಕಾಂ ಆಯೋಗವು ಆಂತರಿಕ ಸಚಿವರ ತಂಡ (ಐಎಂಜಿ)ಕ್ಕೆ ಹೇಳಿದೆ ಎಂದು ಹಿರಿಯ ಸರ್ಕಾರಿ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಟೆಲಿಕಾಂ ಇಲಾಖೆಯಲ್ಲಿ (ಡಿಒಟಿ) ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವ ಮಂಡಳಿ ಟೆಲಿಕಾಂ ಆಯೋಗ ಈ ಒಂದು ಅನಿರೀಕ್ಷಿತ ನಿರ್ಧಾರ ತೆಗೆದುಕೊಂಡಿದೆ. ಟೆಲಿಕಾಂ ಆಯೋಗದ ಅನಿರೀಕ್ಷಿತ ನಿರ್ಧಾರದಿಂದ ಭಾರ್ತಿ ಏರ್‌ಟೆಲ್, ವೊಡಾಫೋನ್ ಇಂಡಿಯಾ, ಐಡಿಯಾ ಸೆಲ್ಯುಲರ್, ರಿಲಯನ್ಸ್ ಕಮ್ಯುನಿಕೇಶನ್ಸ್ ಮತ್ತು ಟಾಟಾ ಟೆಲಿಸರ್ವಿಸಸ್‌ನಂತಹಾ ದೇಶದ ಹಳೆಯ ಟೆಲಿಕಾಂ ಕಂಪೆನಿಗಳಿಗೆ ಹೊಸ ಭರವಸೆ ಮೂಡಿದೆ. ಹರಾಜು ಮಾಡಲಾದ ರೇಡಿಯೋ ತರಂಗಗಳ ಶುಲ್ಕ ಪಾವತಿ ಅವಯನ್ನು 10 ವರ್ಷದಿಂದ 16 ವರ್ಷಕ್ಕೆ ಹೆಚ್ಚಿಸಲು ಮತ್ತು ಪಾವತಿಸದ ಬಾಕಿಗಳ ಬಡ್ಡಿದರವನ್ನು ಕಡಿಮೆ ಮಾಡಲು ಆಂತರಿಕ ಸಚಿವರ ತಂಡ (ಐಎಂಜಿ) ನೀಡಿದ ಸಲಹೆಯಿಂದ ದೇಶದ ಟೆಲಿಕಾಂ ಕಂಪೆನಿಗಳಲ್ಲಿ ನಿರಾಶೆ ಮೂಡಿತ್ತು.
ಇತ್ತೀಚಿನ ಟೆಲಿಕಾಂ ಆಯೋಗದ ಸಭೆಯ ವಿವರಗಳ ಬಗ್ಗೆ ತಿಳಿದಿರುವ ಅಧಿಕಾರಿಗಳು, ಪಾವತಿ ಅವಯ ದೀರ್ಘಕಾಲದ ತನಕ ವಿಸ್ತರಿಸುವುದರಿಂದ ಅಲ್ಪಾವಯಲ್ಲಿ ಟೆಲಿಕಾಂ ಕಂಪೆನಿಗಳಿಗೆ ತಮ್ಮ ಒತ್ತಡವನ್ನು ಕಡಿಮೆ ಮಾಡಲು ಸಾಧ್ಯವಿಲ್ಲ ಎಂಬುದನ್ನು ಸಚಿವಾಲಯ ನಂಬಿದೆ ಎಂದು ಹೇಳಿದ್ದಾರೆ. ಹಣಕಾಸು ತೊಂದರೆಗೆ ಒಳಗಾಗಿರುವ ಟೆಲಿಕಾಂ ವಲಯವನ್ನು ನೋಡಲು ಸರ್ಕಾರವೂ ಬಯಸುವುದಿಲ್ಲ, ಯಾಕೆಂದರೆ ಟೆಲಿಕಾಂ ವಲಯ ದೇಶದ ಖಜಾನೆಗೆ ಪ್ರಮುಖ ಆದಾಯ ಕೊಡುಗೆದಾರ ಎಂಬುದು ಕೆಲವು ಟೆಲಿಕಾಂ ಆಯೋಗದ ಸದಸ್ಯರ ಅಭಿಪ್ರಾಯವಾಗಿದೆ.
ದೇಶದ ಹಳೆಯ ಫೋನ್ ಕಂಪೆನಿಗಳು ಹತ್ತಿರ-ಹತ್ತಿರ ೫ ಲಕ್ಷ ಕೋಟಿ ರೂ. ಸಾಲ ಹೊಂದಿವೆ. ಕಳೆದ ಸೆಪ್ಟೆಂಬರ್‌ನಲ್ಲಿ ರಿಲಯನ್ಸ್ ಜಿಯೋ ಮಾರುಕಟ್ಟೆಗೆ ಲಗ್ಗೆಯಿಟ್ಟ ಬಳಿಕ ಅವುಗಳ ವ್ಯವಹಾರವೂ ಕುಂಠಿತವಾಗಿವೆ, ಟ್ಯಾರಿಫ್‌ಗಳು ಕಡಿಮೆಯಾಗಿವೆ. ಅವುಗಳ ಆದಾಯ ಮತ್ತು ಲಾಭಾಂಶ ಕಳೆದ ಮೂರು ತ್ರೈಮಾಸಿಕಗಳಲ್ಲಿ ಸತತ ಇಳಿಕೆಯನ್ನು ದಾಖಲಿಸಿವೆ. ಈ ಮಧ್ಯೆ ರಿಲಯನ್ಸ್ ಜಿಯೋ, ಟೆಲಿಕಾಂ ಕಂಪೆನಿಗಳಿಗೆ ಪರಿಹಾರ ನೀಡುವುದನ್ನು ವಿರೋಧಿಸಿದೆ.

LEAVE A REPLY