ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನದ ಬೇಡಿಕೆ ಕುಸಿತ : ಬೆಲೆ ಒಂದು ವಾರದಲ್ಲಿ 500 ರೂ. ಇಳಿಕೆ

ಹೊಸದಿಲ್ಲಿ : ಜಾಗತಿಕವಾಗಿ ಚಿನ್ನದ ಬೇಡಿಕೆ ಕುಸಿದ ಪರಿಣಾಮವಾಗಿ, ಒಂದು ವಾರದಲ್ಲಿ ಚಿನ್ನದ ದರ ಇಳಿಕೆಯಾಗಿದೆ. 10 ಗ್ರಾಂ ಚಿನ್ನದ ಬೆಲೆ ಷೇರು ಮಾರುಕಟ್ಟೆಯಲ್ಲಿ 30,350 ರೂ. ನಷ್ಟಾಗಿದೆ. ಸ್ಥಳೀಯ ಆಭರಣ ಮಾರುಕಟ್ಟೆಯಲ್ಲಿಯೂ ಕೂಡ ಬೇಡಿಕೆ ಕುಸಿದಿದ್ದು, ಒಂದು ವಾರದಲ್ಲಿ 500 ರೂ.ನಷ್ಟು ಬೆಲೆ ಕುಸಿದಂತಾಗಿದೆ.
ಇನ್ನು ಬೆಳ್ಳಿಯ ದರದಲ್ಲಿ ಅಲ್ಪ ಪ್ರಮಾಣದಲ್ಲಿ ಚೇತರಿಕೆ ಕಂಡು ಬಂದಿದೆ. ೨೦೦ ರೂ. ಏರಿಕೆಯಾಗುವ ಮೂಲಕ ಪ್ರತೀ ಕೆಜಿ ಬೆಳ್ಳಿಯ ಬೆಲೆ 41,850 ರೂ.ಗಳಾಗಿದೆ. ವಿಶ್ವದಲ್ಲಿ ಚಿನ್ನದ ದರದಲ್ಲಿ ಅಮೆರಿಕನ್ ಡಾಲರ್ ಮೊತ್ತದಲ್ಲಿ ಶೇ. 0.03ರಷ್ಟು ಕುಸಿತವಾಗಿದೆ.
ಅಮೆರಿಕದಲ್ಲಿ ಚಂಡಮಾರುತ ಹಾಗೂ ಉತ್ತರ ಕೊರಿಯಾ ಹಾಗೂ ಅಮೆರಿಕ ನಡುವಿನ ಸಮಸ್ಯೆಗಳೂ ಕೂಡ ಜಾಗತಿಕವಾಗಿ ಚಿನ್ನದ ಬೇಡಿಕೆ ಕಡಿಮೆಯಾಗುವಲ್ಲಿ ಕಾರಣವಾಗಿದೆ. ಇನ್ನು ರಾಷ್ಟ್ರ ರಾಜಧಾನಿಯಲ್ಲಿ 10 ಗ್ರಾಂ ಚಿನ್ನದ ಬೆಲೆ ಮಂಗಳವಾರ 150 ರೂ. ಕುಸಿದು 30,200 ರೂ.ಗಳಾಗಿತ್ತು.

LEAVE A REPLY