ಲಿಂಗಾಯತ ಪ್ರತ್ಯೇಕ ಧರ್ಮ: ಎಂ.ಬಿ. ಪಾಟೀಲ್ ವಿರುದ್ಧ ಬಿಎಸ್‌ವೈ ಗರಂ!

file photo

ಬಾಗಲಕೋಟೆ: ಲಿಂಗಾಯತ ಪ್ರತ್ಯೇಕ ಧರ್ಮದ ವಿಚಾರದಲ್ಲಿ ಸಿದ್ದಗಂಗಾಶ್ರೀಗಳ ಹೆಸರು ಎಳೆದು ತಂದ ವಿಚಾರಕ್ಕೆ ಸಂಬಂಧಿಸಿ ಸಚಿವ ಎಂ.ಬಿ.ಪಾಟೀಲ್ ವಿರುದ್ಧ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಗರಂ ಆಗಿದ್ದು, ಇದು ವಿನಾಶಕಾಲೆ ವಿಪರೀತ ಬುದ್ದಿ ಎಂದು ತಿವಿದಿದ್ದಾರೆ.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ರೀತಿ ಶ್ರೀಗಳ ಹೆಸರು ಎಳೆದು ತರದೆ ಮೌನವಾಗಿರುವುದು ಪಾಟೀಲರಿಗೂ ಗೌರವ ತರುವ ಸಂಗತಿ. ಶ್ರೀಗಳ ಬಗ್ಗೆ ಮತ್ತೆ ಮಾತನಾಡುವ ಪ್ರಯತ್ನ ಮಾಡಿದ್ರೆ ರಾಜ್ಯದ ಯಾವುದೇ ಸಮಾಜದ ಬಂಧುಗಳು ಪಾಟೀಲರ ನಡವಳುಕೆಯನ್ನು ಖಂಡಿಸುತ್ತಾರೆ. ಮೌನವಾಗಿರುವುದು ಅವರಿಗೆ ಶೋಭೆ ತರುವಂಥದ್ದು, ಅಖಿಲಭಾರತ ವೀರಶೈವ ಮಹಾಸಭಾ ಏನು ತೀರ್ಮಾನ ತೆಗೆದುಕೊಳ್ಳುತ್ತಿದ್ದರು, ಅದಕ್ಕೆ ನಾವೆಲ್ಲ ಬದ್ಧರಾಗಿರುತ್ತೇವೆಂದು ನಾವು ಈ ಹಿಂದೇನೆ ಹೇಳಿದ್ದೇವೆ. ರಾಜಕೀಯವಾಗಿ ಇದನ್ನು ಗೊಂದಲ ಮಾಡುವುದು ಸರಿಯಲ್ಲ ಎಂದು ಬಿಎಸ್‌ವೈ ಹೇಳಿದರು.

LEAVE A REPLY