ಶಾಲಾ ಮಕ್ಕಳ ಜೀವವುಳಿಸಲು ಕನಿಷ್ಠಪಕ್ಷ ತೂಗು ಸೇತುವೆ ನಿರ್ಮಿಸಿ ಪ್ಲೀಸ್… ಕಲ್ಮಕಾರು ಗ್ರಾಮಸ್ಥರ ಮೊರೆ

ಕಲ್ಮಕಾರು: ಇದು ಸುಳ್ಯ ವಿಧಾನಸಭಾ ಕ್ಷೇತ್ರದ ಗ್ರಾಮೀಣ ಭಾಗದ ಶೆಟ್ಟಿಕಜೆಯ ಕತೆ. ಇಲ್ಲಿನ ಜನರ ಬೇಡಿಕೆ ಇಷ್ಟೇ… ಸೇತುವೆ ಮಾಡಿಕೊಡಿ… ಅದೂ ಬೇಡ ಕನಿಷ್ಟ ನಡೆದುಕೊಂಡು ಹೋಗಲು ತೂಗುಸೇತುವೆಯಾದರೂ ಮಾಡಿ..!.
ಆದರೆ ಇದುವರೆಗೂ ಈ ಬೇಡಿಕೆ ಈಡೇರಿಲ್ಲ. ಹಾಗಂತ ಇದು ಇಂದು ನಿನ್ನೆಯ ಬೇಡಿಕೆಯಲ್ಲ… ಈ ಬೇಡಿಕೆಗೆ ವರ್ಷಗಳು ಎಷ್ಟು ಸಂದವೋ ಗೊತ್ತಿಲ್ಲ…! ಸುಳ್ಯ ತಾಲೂಕಿನ ಕಲ್ಮಕಾರು ಗ್ರಾಮದಿಂದ ಅಂಜನಕಜೆ ಕೊಪ್ಪಡ್ಕ ಗುಳಿಕಾನ ಗುಡ್ಡೆಕಾನ ಪೆರ್ಮುಕಜೆ ಭಾಗಗಳನ್ನು ತಲುಪಬೇಕಿದ್ದರೆ, ಶೆಟ್ಟಿಕಜೆ ಎಂಬಲ್ಲಿ ಹರಿಯುತ್ತಿರುವ ಹೊಳೆ ದಾಟಿ ತೆರಳಬೇಕು. ಬೇಸಿಗೆಯಲ್ಲಿ ಸಮಸ್ಯೆ ಇಲ್ಲ. ಮಳೆಗಾಲ ಈ ಹೊಳೆ ನೆರೆಯಿಂದ ತುಂಬಿ ಹರಿಯುತ್ತಿದೆ. ಇದರಿಂದ ಈ ಭಾಗದವರಿಗೆ ಸಮಸ್ಯೆ ಆಗುತ್ತದೆ. ಇಲ್ಲಿಂದ ಕಲ್ಮಕಾರು ಪ್ರಾಥಮಿಕ ಶಾಲೆ, ಅಂಗನವಾಡಿ ಹಾಗೂ ಇತರೆಡೆಯ ಶಾಲಾ ಕಾಲೇಜುಗಳಿಗೆ ತೆರಳುವ ಮಕ್ಕಳಿದ್ದಾರೆ, ಅವರಿಗೆ ತೊಂದರೆ ಆಗುತ್ತಿದೆ. ಸುಮಾರು 50 ಮನೆಗಳಿರುವ ಈ ಪ್ರದೇಶದ ಜನರಿಗೆ ಮಳೆಗಾಲ ಇದೊಂದು ದ್ವೀಪದ ಪ್ರದೇಶವಾಗುತ್ತದೆ. ಹೀಗಾಗಿ ಕಳೆದ ಅನೇಕ ವರ್ಷಗಳಿಂದ ಇಲ್ಲೊಂದು ಸೇತುವೆ ಮಾಡಿಕೊಡಿ ಎಂದು ಜನತೆ ಒತ್ತಾಯ ಮಾಡುತ್ತಿದ್ದಾರೆ, ಜನಪ್ರತಿನಿಧಿಗಳಿಗೆ ಮನವಿ ಮಾಡುತ್ತಿ ದ್ದಾರೆ. ಹಾಗಿದ್ದರೂ ಈ ಬೇಡಿಕೆ ಈಡೇರಿಲ್ಲ.
ಆದರೆ ಇತ್ತೀಚೆಗೆ ಕೆಲವು ಸಮಯಗಳಿಂದ ಗ್ರಾ.ಪಂ. ಅನುದಾನದ ಮೂಲಕ ಅಡಿಕೆ ಮರದ ಪಾಲವನ್ನು ನಿರ್ಮಾಣ ಮಾಡಿ  ಜನರು ಮಳೆಗಾಲ ತೂಗುಯ್ಯಾಲೆಯಲ್ಲಿ ಬದುಕು ಸಾಗಿಸುತ್ತಿದ್ದಾರೆ.
ನಗರದಲ್ಲಿ ಕೋಟಿ ಕೋಟಿ ಅನುದಾನದ ಮೂಲಕ ಸೇತುವೆ ನಿರ್ಮಾಣ ಮಾಡುವ ಹಾಗೂ ವಿವಿಧೆಡೆಯಿಂದ ಜನತೆಯ ಒತ್ತಾಯ ಇಲ್ಲದೆಯೇ ಅನುದಾನದ ವ್ಯವಸ್ಥೆ ಮಾಡುವ ಜನಪ್ರತಿನಿಧಿಗಳು ಇಲ್ಲಿಗೆ ಮಾತ್ರ ಅನುದಾನ ನೀಡಲು ಸಾಧ್ಯವಾಗಿಲ್ಲವೇ ಎಂದು ಜನತೆ ಪ್ರಶ್ನೆ ಮಾಡುತ್ತಾರೆ. ಈಗ ಇಲ್ಲಿ ನಿತ್ಯವೂ ಸಮಸ್ಯೆಯಾಗುತ್ತಿದೆ. ಮಕ್ಕಳಿಗೆ ನಿತ್ಯವೂ ಶಾಲೆಗೆ ಹೋಗಲು ಸಮಸ್ಯೆಯಾಗುತ್ತಿದೆ. ಇಲ್ಲಿನ ನಿವಾಸಿಗಳು ಜೀವ ಕೈಯಲ್ಲಿ ಹಿಡಿದು ಸೇತುವೆ ದಾಟುವ ಸಾಹಸ ಮಾಡುತ್ತಿದ್ದಾರೆ. ಇಲ್ಲಿಗೆ ಶಾಶ್ವತವಾಗಿ ಸೇತುವೆಯೊಂದನ್ನು ನಿರ್ಮಿಸಿಕೊಡಿ ಎಂದು ನಲವತ್ತು ವರ್ಷಗಳಿಂದ ಬೇಡಿಕೆ ಇಟ್ಟಿದ್ದಾರೆ ಇಲ್ಲಿಯ ನಾಗರಿಕರು. ಇವರ ಬೇಡಿಕೆಗೆ ಜನಪ್ರತಿನಿಧಿಗಳ ಮನ ಕರಗಲಿಲ್ಲ. ವರ್ಷಂಪ್ರತಿ ನೀಡುವ ಭರವಸೆ ಬಂಡೆ ಕಲ್ಲಿನ ಮೇಲೆ ನೀರು ಸುರಿದಂತೆ ಆಗಿದೆ. ಇದುವರೆಗೆ ಪ್ರಯೋಜನಕ್ಕೆ ಬಂದಿಲ್ಲ. ಇಲ್ಲಿ ಪ್ರತೀ ವರ್ಷ ಸ್ಥಳೀಯರು ಅಡಿಕೆ ಮರ, ಬಿದಿರು ಸಾಮಗ್ರಿಗಳನ್ನು ಬಳಸಿಕೊಂಡು ತಾತ್ಕಾಲಿಕ ಸೇತುವೆ ನಿರ್ಮಿಸಿಕೊಳ್ಳುತ್ತಿದ್ದಾರೆ.
ಈ ಸೇತುವೆಯಲ್ಲಿ ಒಂದು ಹೆಜ್ಜೆ ಇಟ್ಟರೂ ಕೆಳಗೆ ಬೀಳುವ ಆತಂಕ. ಪ್ರತಿದಿನ ಮಕ್ಕಳ ಪೋಷಕರು ಎರಡು ಹೊತ್ತು ಅರ್ಧ ದಾರಿಯವರೆಗೆ ಅಂದರೆ ಸೇತುವೆ ಇರುವಲ್ಲಿವರೆಗೆ ಬಂದು ಮಕ್ಕಳನ್ನು ಸೇತುವೆ ದಾಟಿಸಿ ಶಾಲೆಗೆ ಕಳುಹಿಸಿ ತೆರಳುತ್ತಾರೆ. ಸಂಜೆ ಮತ್ತೆ ಸೇತುವೆಯ ದಡದ ಬದಿ ಕಾದು ಕುಳಿತು ಶಾಲೆ ಬಿಟ್ಟಾಗ ಮನೆಗೆ ಕರೆದುಕೊಂಡು ಹೋಗುವ ಕೆಲಸ ಮಾಡುತ್ತಾರೆ. ಕಲ್ಮಕಾರು-ಅಂಜನಕಜೆ ಕೊಪ್ಪಡ್ಕ ಗುಳಿಕಾನ ಗುಡ್ಡೆಕಾನ ಪೆರ್ಮುಕಜೆ ಮಧ್ಯೆ ಸಂಪರ್ಕ ಸಾಧಿಸುವ ಈ ಪ್ರದೇಶದಲ್ಲಿ ೪೦ಕ್ಕೂ ಅಧಿಕ ಮನೆಗಳಿವೆ. ಪರಿಶಿಷ್ಟ ಜಾತಿ ಪಂಗಡಗಳ ಕುಟುಂಬಗಳು ಇಲ್ಲಿವೆ. ವಾಹನ ಊರಿಗೆ ಬರಲು ಸಾಧ್ಯವಿಲ್ಲದ ಕಾರಣ ಸೇತುವೆ ಮೇಲೆ ಹೊತ್ತು ಅನಾರೋಗ್ಯ ಪೀಡಿತರನ್ನು ಆಸ್ಪತ್ರೆಗೆ ಸಾಗಿಸಬೇಕು.
ಬೀಳುವ ಆತಂಕ
ಈ ಸೇತುವೆಯಲ್ಲಿ ಒಂದು ಹೆಜ್ಜೆ ಇಟ್ಟರೂ ಕೆಳಗೆ ಬೀಳುವ ಆತಂಕ. ಪ್ರತಿದಿನ ಮಕ್ಕಳ ಪೋಷಕರು ಎರಡು ಹೊತ್ತು ಅರ್ಧ ದಾರಿಯವರೆಗೆ ಅಂದರೆ ಸೇತುವೆ ಇರುವಲ್ಲಿವರೆಗೆ ಬಂದು ಮಕ್ಕಳನ್ನು ಸೇತುವೆ ದಾಟಿಸಿ ಶಾಲೆಗೆ ಕಳುಹಿಸಿ ತೆರಳುತ್ತಾರೆ.

LEAVE A REPLY