ಅಮೆರಿಕದ ಬರ್ಕ್ಲೀ ವಿಶ್ವವಿದ್ಯಾಲಯದಲ್ಲಿ ರಾಹುಲ್ ಪ್ರಹಸನ: ಕಾಂಗ್ರೆಸ್ ಸಮರ್ಥನೆ

ವಾಷಿಂಗ್ಟನ್: ಕಾಂಗ್ರೆಸ್ ನಾಯಕರ ಸಮರ್ಥನೆಗಳ ಹೊರತಾಗಿಯೂ, ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್‌ಗಾಂಧಿ ಅವರು ಅಮೆರಿಕದ ಬರ್ಕ್ಲೀ ವಿಶ್ವವಿದ್ಯಾಲಯದಲ್ಲಿ ನಡೆಸಿದ ಸಂವಾದ ಕಾರ್ಯಕ್ರಮ ವಸ್ತುಶಃ ಪ್ರಹಸನವಾಗಿ ಚರ್ಚೆಗೆ ಕಾರಣವಾಗಿದೆ. ಈ ಬಗ್ಗೆ ಟ್ವಿಟರ್‌ನಲ್ಲಿ ವ್ಯಾಪಕ ಜೋಕುಗಳು ಹರಿದಾಡುತ್ತಿವೆ.
ಭಾರತದಲ್ಲಿ ವಂಶವಾದಿ ರಾಜಕೀಯ ಕುರಿತಂತೆ ಕೇಳಿದಾಗ, ತನ್ನನ್ನು  ಮಾತ್ರ ಈ ವಿಷಯದಲ್ಲಿ ದೂರಬೇಡಿ, ಚಿತ್ರರಂಗದಲ್ಲಿ ಅಮಿತಾಬ್ ಬಚ್ಚನ್ ಪುತ್ರ ಅಭಿಷೇಕ್ ಬಚ್ಚನ್‌ರದ್ದು ವಂಶವಾದವಲ್ಲವೇ? ಉದ್ಯಮ ರಂಗದ ಮುಕೇಶ್ ಅಂಬಾನಿಯದು  ವಂಶವಾದವಲ್ಲವೇ? ಎಂದೆಲ್ಲ ಪ್ರತಿಪ್ರಶ್ನೆ ಎಸೆದು ರಾಹುಲ್ ಈಗ ನಗೆಪಾಟೀಲಿಗೀಡಾಗಿದ್ದಾರೆ.
ತಾನು ಪ್ರಧಾನಿ ಅಭ್ಯರ್ಥಿಯಾಗಲು ಸಿದ್ದ ಎಂದು ಹೇಳಿಕೊಂಡ ರಾಹುಲ್, ಭಾರತೀಯ ಸಂಸತ್ತಿನ ಸ್ಥಾನಗಳ ಸಂಖ್ಯೆಯನ್ನು 545ರ ಬದಲು 546 ಎಂದು ತಪ್ಪಾಗಿ  ಹೇಳುವ ಮೂಲಕ  ತಾನಿನ್ನೂ ಅಪಕ್ವ ಎಂಬುದನ್ನು ತಾನಾಗಿಯೇ ತೋರಿಸಿಕೊಂಡಿದ್ದಾಗಿ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ.
ಅಲ್ಲದೆ, ಕಾರ್ಯಕ್ರಮದಲ್ಲಿ ಮಹಿಳೆಯೊಬ್ಬರು ಕಾರ್ಯಕ್ರಮದ ಸಮನ್ವಯಕಾರರನ್ನು ತೀವ್ರವಾಗಿ ತರಾಟೆಗೆತ್ತಿಕೊಂಡು , ಕಾರ್ಯಕ್ರಮವನ್ನು ನೀವೇ ನಿಯಂತ್ರಿಸುತ್ತಿರುವಾಗ ಇದನ್ನು ಮುಕ್ತ ಭಾಷಣ ಎಂದು  ಹೇಗೆ ಹೇಳುತ್ತೀರಿ ಎಂದು ಪ್ರಶ್ನಿಸಿದ ಘಟನೆಯೂ ನಡೆಯಿತು. ಪ್ರಾಯಶಃ ಮಹಿಳೆ ರಾಹುಲ್ ಗಾಂಯವರಿಗೆ ಪ್ರಶ್ನೆಯೊಂದನ್ನು ಕೇಳಲು ಮುಂದಾಗಿದ್ದು, ಇದನ್ನು ತಡೆಯಲು ಕಾರ್ಯಕ್ರಮ ಸಮನ್ವಯಕಾರ ಯತ್ನಿಸಿದ್ದು  ಈ ಪ್ರಹಸನಕ್ಕೆ ಕಾರಣವಾಯಿತೆನ್ನಲಾಗಿದೆ.
ಕಾಂಗ್ರೆಸ್ ನಾಯಕರು ಮಾತ್ರ ರಾಹುಲ್ ಅವರನ್ನು ಸಮರ್ಥಿಸಲು  ಇನ್ನಿಲ್ಲದ ಯತ್ನ ನಡೆಸಿದ್ದಾರೆ. ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್ ಅವರಂತೂ ರಾಹುಲ್ ಅವರಿಗಿಂತ ತಾನು ಇನ್ನೊಂದು ಹೆಜ್ಜೆ ಮುಂದೆ ಎಂದು ತೋರಿಸಿಕೊಳ್ಳಲು ಯತ್ನಿಸಿದ್ದಾರೆ. ದೇಶದಲ್ಲಿ ವಂಶವಾದ , ವಂಶವಾದ ಎನ್ನಲಾಗುತ್ತಿದೆ. ಆದರೆ ಆರೆಸ್ಸೆಸ್ ಸರ ಸಂಘಚಾಲಕ್ ಮೋಹನ್ ಭಾಗ್ವತ್ ಅವರು ಗುಜರಾತಿನ ಮಾಜಿ ಪ್ರಚಾರ ಪ್ರಮುಖ್ ಮಧುಕರ ರಾವ್ ಭಾಗ್ವತ್ ಅವರ ಪುತ್ರರಾಗಿರುವುದು ವಂಶವಾದವಲ್ಲವೇ? ಆರೆಸ್ಸೆಸ್‌ನ ಹಿರಿಯ ನಾಯಕರಾಗಿದ್ದ ಮಾ.ಗೋ.ವೈದ್ಯ ಡಾ.ಮನಮೋಹನ್ ವೈದ್ಯ ಅವರು ಸಂಘದ ಪ್ರಚಾರ ಪ್ರಮುಖರಾಗಿಲ್ಲವೇ ಎಂಬಿತ್ಯಾದಿ ಪ್ರಶ್ನೆಗಳನ್ನು ಎಸೆದಿರುವ ದಿಗ್ವಿಜಯ್ ಸಿಂಗ್  ಅವರಿಗೆ ವಂಶವಾದ ಬಗ್ಗೆ ಪ್ರಜಾತಂತ್ರದ ಆಶಯ, ಅಪೇಕ್ಷೆ  ಏನೆಂಬುದರ ಬಗ್ಗೆಯೇ ಕಾಂಗ್ರೆಸ್ ನಾಯಕರಿಗೆ ಸರಿಯಾದ ಕಲ್ಪನೆ ಇಲ್ಲದಿರುವುದನ್ನು ವ್ಯಕ್ತಗೊಳಿಸಿತು.

LEAVE A REPLY