ರಾಹುಲ್ ವಿಫಲ ವಂಶಪಾರಂಪರಿಕ ರಾಜಕಾರಣಿ: ಸ್ಮೃತಿ ತಿರುಗೇಟು

ಹೊಸದಿಲ್ಲಿ: ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ವಿಫಲರಾದ ವಂಶಪಾರಂಪರಿಕ ರಾಜಕಾರಣಿ ಎಂದು ಸಚಿವೆ ಸ್ಮೃತಿ ಇರಾನಿ ಟೀಕಿಸಿ
ದ್ದಾರೆ.ವಿಫಲ ರಾಜಕಾರಣಿಯಾಗಿರುವ ರಾಹುಲ್ ಗಾಂಧಿ ಪ್ರತಿಷ್ಠಿತ ಅಂತಾರಾಷ್ಟ್ರೀಯ ಸಂಸ್ಥೆಯಲ್ಲಿ ತಮ್ಮ ವಿಫಲ ಯಾನದ ಬಗ್ಗೆ ಮಾತನಾಡಿದ್ದಾರೆ ಎಂದು ಸ್ಮೃತಿ ವ್ಯಂಗ್ಯವಾಡಿದ್ದಾರೆ.
ದೇಶದಲ್ಲಿ ಎಡೆ ವಂಶ ಪಾರಂಪರಿಕತೆ ಇದೆ ಎಂದು ಹೇಳುವಾಗ ರಾಹುಲ್ ಗಾಂಧಿ ಸ್ವತಂತ್ರ ಭಾರತವನ್ನು ಮರೆತಿರಬೇಕು. ಜೀವನದ ವಿವಿಧ ಹಂತಗಳಲ್ಲಿ ವಿವಿಧ ಕ್ಷೇತ್ರಗಳಲ್ಲಿ ಕೊಡುಗೆ ನೀಡಿದ ಅನೇಕ ನಾಗರಿಕರು ದೇಶದಲ್ಲಿದ್ದಾರೆ.. ಅವರು ಯಾರೂ ರಾಜಕಾರಣದ ಹಿನ್ನೆಲೆಯುಳ್ಳವರಲ್ಲ. ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರಪತಿ, ಉಪ ರಾಷ್ಟ್ರಪತಿಗಳೂ ಸಾಮಾನ್ಯ ಹಿನ್ನೆಲೆಯಿಂದ ಬಂದವರು ಎನ್ನುವ ಮೂಲಕ ರಾಹುಲ್ ವಂಶಪಾರಂಪರಿಕತೆ ಸಮರ್ಥನೆಗೆ ಸ್ಮೃತಿ ಇರಾನಿ ತಿರುಗೇಟು ನೀಡಿದ್ದಾರೆ.

LEAVE A REPLY