ಆಂಧ್ರದ ಖ್ಯಾತ ಸಾಹಿತಿ ಡಾ. ಕಾಂಚ ಐಲಯ್ಯಗೆ ಜೀವ ಬೆದರಿಕೆ

ಹೈದರಾಬಾದ್: ಆಂಧ್ರದ ಖ್ಯಾತ ಸಾಹಿತಿ ಡಾ. ಕಾಂಚ ಐಲಯ್ಯ ಅವರಿಗೆ ಅನಮಧೇಯ ವ್ಯಕ್ತಿಗಳು ಜೀವಬೆದರಿಕೆ ಒಡ್ಡುತ್ತಿರುವ ಘಟನೆ ಬೆಳಕಿಗೆ ಬಂದಿದೆ.
ಈ ಬಗ್ಗೆ ಅವರು ಹೈದರಾಬಾದ್‌ನ ಉಸ್ಮಾನಿಯಾ ವಿಶ್ವವಿದ್ಯಾಲಯ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ನನ್ನ ಕೃತಿ, ಲೇಖನಗಳ ಬಗ್ಗೆ ವಾರ್ತಾವಾಹಿನಿಯೊಂದರಲ್ಲಿ ಖಂಡನೆ ವ್ಯಕ್ತವಾಗಿತ್ತು. ಅದಾದ ಬಳಿಕ ಕೆಲವರು ನನ್ನ ನಾಲಿಗೆ ಕತ್ತರಿಸುವುದಾಗಿ ಬೆದರಿಕೆ ಹಾಕಿದ್ದಾರೆ.ಇದಲ್ಲದೆ ಫೋನ್ ಕರೆಗಳು, ಮೆಸೇಜ್‌ಗಳು ಬರುತ್ತಿದ್ದು, ಆತಂಕ ಹುಟ್ಟಿಸಿದೆ. ನನಗೆ ಏನಾದರೂ ಆದರೆ ಇವರು ನೇರ ಹೊಣೆಗಾರರು ಎಂದು ಡಾ. ಕಾಂಚ ಐಲಯ್ಯ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.
ಇತ್ತೀಚೆಗಷ್ಟೇ ಬೆಂಗಳೂರಿನಲ್ಲಿ ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣ ನಡೆದಿರುವ ಬೆನ್ನಿಗೇ ಆಂಧ್ರ ಪ್ರದೇಶದ ಖ್ಯಾತ ಸಾಹಿತಿ ಡಾ. ಕಾಂಚ ಐಲಯ್ಯ ಅವರನ್ನು ಕೊಲ್ಲುವುದಾಗಿ ಜೀವ ಬೆದರಿಕೆ ಕರೆಗಳು ಬರುತ್ತಿರುವುದು ಆತಂಕ ಸೃಷ್ಟಿಸಿದೆ.

LEAVE A REPLY