ಅಫ್ಘಾನಿಸ್ತಾನದಲ್ಲಿ ಐಎಸ್ ಅಟ್ಟಹಾಸ : 35 ಮಂದಿ ನಾಗರಿಕರ ಅಪಹರಣ

ಕಾಬೂಲ್: ಇಸ್ಲಾಮಿಕ್ ಸ್ಟೇಟ್ ಮತ್ತು ತಾಲಿಬಾನ್ ಉಗ್ರರು ಅಫ್ಘಾನಿಸ್ತಾನದಲ್ಲಿ ಮತ್ತೆ ಅಟ್ಟಹಾಸ ಮುಂದುವರಿಸಿದ್ದು, ಇಂದು 35ಕ್ಕೂ ಅಧಿಕ ಮಂದಿ ನಾಗರಿಕರನ್ನು ಅಪಹರಿಸಿದ್ದಾರೆ.
ಯುದ್ಧ ಮತ್ತು ಹಿಂಸಾಚಾರದಿಂದ ತತ್ತರಿಸಿರುವ ಅಫ್ಘಾನಿಸ್ತಾನದ ಕುಶ್‌ಟಿಪಾ ಮತ್ತು ಡರ್ಜಾಬ್ ಜಿಲ್ಲೆಗಳಲ್ಲಿ ಎರಡೂ ಬಣಗಳ ಉಗ್ರರು ಪ್ರತ್ಯೇಕ ಚೆಕ್ ಪೋಸ್ಟ್‌ಗಳನ್ನು ನಿರ್ಮಿಸಿಕೊಂಡು ನಾಗರಿಕರನ್ನು ಅಪಹರಿಸಿದ್ದಾರೆ ಎಂದು ಸುದ್ದಿ ಸಂಸ್ಥೆಗಳು ವರದಿಮಾಡಿವೆ.
ತಮ್ಮ ಬಗ್ಗೆ ಭದ್ರತಾಪಡೆಗಳಿಗೆ ಮಾಹಿತಿ ನೀಡುತ್ತಿದಾರೆ ಎಂಬ ಆರೋಪದ ಮೇಲೆ ಈ ಅಪಹರಣ ನಡೆದಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಅಪಹೃತರ ಬಗ್ಗೆ ಇದುವರೆಗೆ ಯಾವುದೇ ಮಾಹಿತಿ ಇಲ್ಲವಾಗಿದ್ದು, ಭದ್ರತಾಪಡೆಗಳು ಇವರಿಗಾಗಿ ಶೋಧ ಕಾರ್ಯಾಚರಣೆ ಮುಂದುವರಿಸಿವೆ.

LEAVE A REPLY