ಮೋದಿ, ಯೋಗಿ ಚಿತ್ರ ಬಿಡಿಸಿದ್ದಕ್ಕೆ ನವ ವಿವಾಹಿತೆಗೆ ಹಲ್ಲೆ ನಡೆಸಿದ ತಂಡ!

ಬಲಿಯಾ (ಉ.ಪ್ರ.): ಪ್ರಧಾನಿ ನರೇಂದ್ರ ಮೋದಿ ಮತ್ತು ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರ ಚಿತ್ರ ರಚಿಸಿ ಕಾರಣಕ್ಕೆ ಮುಸ್ಲಿಂ ನವ ವಿವಾಹಿತೆಯೊಬ್ಬಳಿಗೆ ಐವರೊಂದಿಗೆ ಸೇರಿ ಆಕೆಯ ಪತಿ ಥಳಿಸಿ, ಮನೆಯಿಂದ ಹೊಗಟ್ಟಿದ ಘಟನೆ ಉತ್ತರಪ್ರದೇಶದ ಬಲಿಯಾ ಜಿಲ್ಲೆಯ ಸಿಕಂದರ್‍ಪುರ ಎಂಬಲ್ಲಿ ನಡೆದಿದೆ.
ಹಲ್ಲೆಗೊಳಗಾದವರನ್ನು ನಗ್ಮಾ ಪರ್ವೀನ್ ಎಂದು ಹೆಸರಿಸಲಾಗಿದೆ.
ಈ ಬಗ್ಗೆ ಆಕೆಯ ತಂದೆ ಆರು ಮಂದಿ ವಿರುದ್ಧ ಸಿಕಂದರ್‍ಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಮೋದಿ ಮತ್ತು ಯೋಗಿ ಚಿತ್ರ ಬರೆದು ನನ್ನ ಮಗಳನ್ನು ಅಳಿಯ ಮತ್ತು ಇತರ ಐವರು ಥಳಿಸಿ ಮನೆಯೊಂದ ಹೊರ ಹಾಕಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

LEAVE A REPLY