ಸಾರ್ವಜನಿಕ ಸಾರಿಗೆಗಳಲ್ಲಿ ರಾಸಾಯನಿಕ ದಾಳಿಗೆ ಸಂಚು: ಎಲ್ಲೆಡೆ ಕಟ್ಟೆಚ್ಚರ

file photo

ನವದೆಹಲಿ: ವಿಮಾನಗಳ ಸಹಿತ ಇತರ ಸಾರ್ವಜನಿಕ ವಾಹನಗಳಲ್ಲಿ ವಿಷಾನಿಲ ದಾಳಿ ನಡೆಸುವ ಮೂಲಕ ರಾಸಾಯನಿಕ ಆಕ್ರಮಣ ನಡೆಸಲು ಉಗ್ರರು ಹೊಸ ಸಂಚು ನಡೆಸುತ್ತಿದ್ದಾರೆ ಎಂದು ಗುಪ್ತಚರ ಇಲಾಖೆ ಎಚ್ಚರಿಕೆ ನೀಡಿದೆ.
ಈ ಸ್ಫೋಟಕ ಮಾಹಿತಿಯ ಹಿನ್ನೆಲೆಯಲ್ಲಿ ವಿಮಾನ ನಿಲ್ದಾಣಗಳು, ರೈಲು, ಬಸ್ ಮತ್ತು ಮೆಟ್ರೋ ನಿಲ್ದಾಣಗಳಲ್ಲಿ ತೀವ್ರ ನಿಗಾ ವಹಿಸುವಂತೆ ಹಾಗೂ ಪ್ರಯಾಣಿಕರ ಮತ್ತು ಸರಕು ಸಾಗಣೆ ಲಗೇಜುಗಳನ್ನು ತೀವ್ರ ತಪಾಸಣೆ ನಡೆಸುವಂತೆ ಎಲ್ಲ ರಾಜ್ಯಗಳಿಗೆ ಕೇಂದ್ರ ಗೃಹ ಸಚಿವಾಲಯ ಸೂಚನೆ ನೀಡಿದೆ.
ಒಂದೆಡೆ ಭಯೋತ್ಪಾದನೆ ಮಟ್ಟಹಾಕಲು ಕೇಂದ್ರ ಸರ್ಕಾರ ಮುಂದಾಗಿರುವಾಗಲೇ ಉಗ್ರರು ಮತ್ತಷ್ಟು ವಿಧ್ವಂಸಕ ಕೃತ್ಯ ನಡೆಸಲು ಸಂಚು ರೂಪಿಸುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.

LEAVE A REPLY