ಡೇರಾ ಬಾಬನ ಸಚ್ಚಾ ಸೌಧದಲ್ಲಿವೆ ಅಕ್ರಮ ಸ್ಫೋಟಕ ತಯಾರಿಕಾ ಫ್ಯಾಕ್ಟರಿ!

ಸಿರ್ಸಾ(ಹರಿಯಾಣ): ಅತ್ಯಾಚಾರ ಪ್ರಕರಣದಲ್ಲಿ ಜೈಲು ಸೇರಿರುವ ಬಾಬಾ ಗುರ್ಮಿತ್ ರಾಮ್ ರಹೀಂ ಸಿಂಗ್ ನೇತೃತ್ವದ ಡೇರಾ ಸಚ್ಚಾ ಸೌಧದಲ್ಲಿ ನಡೆಯುತ್ತಿರುವ ಶೋಧದ ಎರಡನೇ ದಿನ ಅಕ್ರಮ ಪಟಾಕಿ ತಯಾರಿಕೆ ಕಾರ್ಖಾನೆ ಪತ್ತೆಯಾಗಿದ್ದು, ಇದನ್ನು ಸ್ಫೋಟಕ ತಯಾರಿಕೆಗೆ ಬಳಸಲಾಗುತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಡೇರಾ ಸಚ್ಚಾ ಸೌಧದದ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಲು ನ್ಯಾಯಾಲಯ ನೀಡಿರುವ ಆದೇಶದ ಹಿನ್ನೆಲೆಯಲ್ಲಿ ಭದ್ರತಾಪಡೆಗಳು ಇಲ್ಲಿ ಶೋಧ ಕಾರ್ಯಾಚರಣೆ ನಡೆಸುತ್ತಿವೆ. ಬರೋಬ್ಬರಿ 800 ಎಕರೆ ಪ್ರದೇಶದಲ್ಲಿ ವ್ಯಾಪಿಸಿಕೊಂಡಿರುವ ಈ ಆಶ್ರಮದಲ್ಲಿ ಅನೇಕ ಅಕ್ರಮ-ಅವ್ಯವಹಾರಗಳು ಒಂದೊಂದಾಗಿ ಬೆಳಕಿಗೆ ಬರುತ್ತಿವೆ.
ಶೋಧ ಕಾರ್ಯಾಚರಣೆಯ ಮೊದಲ ದಿನವಾದ ನಿನ್ನೆ ಈ ಆಶ್ರಮದ ಕೊಠಡಿಗಳಿಂದ ಕಂಪ್ಯೂಟರ್, ಹಾರ್ಡ್ ಡಿಸ್ಕ್‌ಗಳು ಮತ್ತು ಅಪಾರ ನಗದನ್ನು ವಶಪಡಿಸಿಕೊಳ್ಳಲಾಗಿತ್ತು. ಅಲ್ಲದೇ ಇಲ್ಲಿ ರಹಸ್ಯ ಕೋಣೆಯೊಂದು ಇರುವುದೂ ಕಂಡುಬಂದಿತ್ತು.

LEAVE A REPLY