ಬೋಗಿಯನ್ನು ಬಿಟ್ಟು ಒಂದು ಕಿಲೋಮೀಟರ್ ದೂರ ಸಾಗಿದ ಎಂಜಿನ್!

ಬಾದೋಹಿ: ರೈಲು ಎಂಜಿನ್ ಬೋಗಿಯಿಂದ ಬೇರ್ಪಟ್ಟು ಸುಮಾರು ಒಂದು ಕಿ.ಮೀ. ತೆರಳಿದ ವಿಲಕ್ಷಣ ಘಟನೆಯೊಂದು ಉತ್ತರಪ್ರದೇಶದಲ್ಲಿ ನಡೆದಿದೆ.
ಉತ್ತರ ಪ್ರದೇಶದ ಜ್ಞಾನಪುರ ರೈಲು ನಿಲ್ದಾಣ ತಲುಪುವ ಸಂದರ್ಭದಲ್ಲಿ ಈ ಘಟನೆ ನಡೆದಿದ್ದು, ನವದೆಹಲಿ-ಮುಂದುವಾದಿಹ್ ನಡುವೆ ಸಂಚರಿಸುವ ಶಿವಗಂಗಾ ಎಕ್ಸ್‌ಪ್ರೆಸ್ ರೈಲಿನ ಎಂಜಿನ್, ಬೋಗಿಯಿಂದ ಪ್ರತ್ಯೇಕಗೊಂಡು ಒಂದು ಕಿ.ಮೀ. ದೂರ ತೆರಳಿದೆ ಎಂದು ಸ್ಟೇಷನ್ ಮಾಸ್ಟರ್ ತಿಳಿಸಿದ್ದಾರೆ. ಇದು ಗಮನಕ್ಕೆ ಬಂದ ಬಳಿಕ ಬಳಿಕ ಗೇಟ್ ನಂಬರ್ 42-ಬಿನಲ್ಲಿ ಬೋಗಿಗಳನ್ನು ಇಂಜಿನ್‌ಗೆ ಸೇರಿಸಲಾಯಿತು.

LEAVE A REPLY