ಕಾರಿನ ಮೇಲೆ ಉರುಳಿದ ಮರ, ಮತ್ತೆ ಜಲಾವೃತಗೊಂಡ ನಗರ: ಮುಸಲಧಾರೆಗೆ ಸಿಲಿಕಾನ್ ಸಿಟಿ ತತ್ತರ

ಬೆಂಗಳೂರು: ಶುಕ್ರವಾರ ಮಳೆ ಮತ್ತೆ ಸಿಲಿಕಾನ್ ಸಿಟಿಯನ್ನು ಬೆಚ್ಚಿ ಬೀಳಿಸಿದೆ.
ಸಂಜೆ ಬಳಿಕ ಕಾನಿಸಿಕೊಂಡ ಬಿರುಗಾಳಿ ಸಹಿತದ ಧಾರಾಕಾರ ಮಳೆಗೆ ಬೆಂಗಳೂರು ನಗರ ಆಕ್ಷರಶಃ ನಡುಗಿಹೊಗೊದ್ದು, ಹಲವೆಡೆಗಳಲ್ಲಿ ಅನಾಹುತ ಸೃಷ್ಟಿಸಿದೆ.
ಈ ನಡುವೆ ಶೇಷಾದ್ರಿಪುರಂ ರೈಲ್ವೆ ಅಂಡರ್ ಪಾಸ್ ಬಳಿ ಯುವಕನೊಬ್ಬ ನೀರಿನಲ್ಲಿ ಕೊಚ್ಚಿಹೋಗಿದ್ದಾನೆ ಎನ್ನಲಾಗಿದ್ದು, ಆತನಿಗಾಗಿ ತಡರಾತ್ರಿಯವರೆಗೂ ಹುಡುಕಾಟ ಮುಂದುವರಿದಿತ್ತು. ನಗರದ ಮಿನರ್ವ ವೃತ್ತದ ಬಳಿ ಕಾರೊಂದರ ಮೇಲೆ ಮರವೊಂದು ಉರುಳಿ ಬಿದ್ದು, ಮೂವರು ಗಂಭೀರ ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ. ಹನುಮಂತನಗರದಲ್ಲಿ ಮಳೆಯಿಂದಾಗಿ ಕರೆಂಟ್ ಕಂಬವೊಂದು ಧರೆಗುರುಳಿದ್ದರೆ, ಹನುಮಂತನಗರ, ಜಯನಗರ, ಬಸವನಗುಡಿ, ಕೋರಮಂಗಲ, ವಿಲ್ಸನ್ ಗಾರ್ಡನ್, ಆಡುಗೋಡಿ, ಮಡಿವಾಳ, ಮಾರುತಿ ವೃತ್ತಮೊದಲಾದ ಕಡೆಗಳಲ್ಲಿ ಮಳೆ ಅಪಾರ ಹಾನಿಯುಂಟುಮಾಡಿದೆ. ಹೆಚ್ಚಿ ವಿವರ ನಿರೀಕ್ಷಿಸಲಾಗುತ್ತಿದೆ.

LEAVE A REPLY