ಮತಾಂಧರ ಗುರಿ ಸ್ಪಷ್ಟವಿದೆ, ಸರ್ಕಾರಕ್ಕೆ ಅವರ ಮೇಲೆ ಪ್ರೀತಿಯಿದೆ!

  • ಸಂತೋಷ್ ತಮ್ಮಯ್ಯ
ಕಂಡಕಂಡಲ್ಲಿ ಬಾಂಬು ಸ್ಫೋಟಿಸಿ, ಅದರ ಹೊಣೆಯನ್ನು ಹೆಮ್ಮೆಯಿಂದ ಹೊತ್ತುಕೊಳ್ಳುತ್ತಿದ್ದ ಸಿಮಿ ಎಂಬ ಉಗ್ರವಾದಿ ಸಂಘಟನೆ ನಿಷೇಧವಾದ ನಂತರ ದೇಶದಲ್ಲಿ ಹಲವಾರು ಮುಸಲ್ಮಾನ ಸಂಘಟನೆಗಳು ನಾಯಿಕೊಡೆಗಳಂತೆ ಹುಟ್ಟಿಕೊಂಡವು. ಸಿಮಿಯೇನೋ ನಿಷೇಧವಾಯಿತು. ಆದರೆ ವಿಷ ನಿಷೇಧವಾಗಲಿಲ್ಲ. ಅದು ಹಲವಾರು ರೂಪಗಳಲ್ಲಿ ಹುಟ್ಟಿಕೊಂಡಿತು. ಸಿಮಿ ನಿಷೇಧವಾದಾಗ ಅದರ ಪ್ರಮುಖರು ಹಲವಾರು ಸಂಘಟನೆಗಳಲ್ಲಿ ಚದುರಿಹೋಗಿದ್ದರು. ಕೆಲವರು ಹೊಸ ಸಂಘಟನೆಯನ್ನು ಕಟ್ಟಿದರು. ಅದರ ನಿಷೇಧದ ನಂತರ ಮತಾಂಧರು ಒಂದು ಪಾಠವನ್ನು ಕಲಿತರು ಎಂದೇ ಹೇಳಬೇಕು. ಏಕೆಂದರೆ ಏಕಾಏಕಿ ಬಾಂಬುಸ್ಫೋಟಿಸುವ ಬದಲು ಸಾಮಾಜಿಕ ಮುಖವನ್ನು ಹೊತ್ತು ಕಾರ್ಯಕ್ಕಿಳಿಯುವ ಉಪಾಯವನ್ನು ಕಂಡುಕೊಂಡರು. ಹಾಗೆ ಕಾರ್ಯಕ್ಕಿಳಿಯಲು ಹೊರಟವರು ಕೆಲವರಾದರೆ ಇನ್ನು ಕೆಲವರಿಗೆ ಬಾಂಬಿನ ನಂಟನ್ನು ಬಿಡಲಾಗಲಿಲ್ಲ. ಅವರೆಲ್ಲರೂ  ಮುಜಹಿದ್ದೀನ್ ಸಂಘಟನೆಗಳಿಗೆ ಸೇರಿದರು. ಏನೇ ಆದರೂ ಸಿಮಿಯ ಸ್ಥಾನವನ್ನು ತುಂಬಬೇಕಿತ್ತು. ಅದು ದೇಶಾದ್ಯಂತ ವ್ಯಾಪಿಸಬೇಕಿತ್ತು. ಅದಕ್ಕಾಗಿ ಅದು ಹಲವಾರು ರಾಜ್ಯಗಳಲ್ಲಿ ಹಲವಾರು ಹೆಸರುಗಳಿಂದ ಸಂಘಟನೆಗಳನ್ನು ಸ್ಥಾಪಿಸಿತು. ಹೀಗೆ ಸ್ಥಾಪನೆಯಾದದ್ದೇ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ.
ಜಗತಿಕವಾಗಿ ಮುಸಲ್ಮಾನರಲ್ಲಿ ಭ್ರಾತೃತ್ವವನ್ನು ತರುವ ಉದ್ದೇಶವನ್ನು ಹೊಂದಿರುವ  ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಇಂದು ಇಡೀ ದೇಶ ವ್ಯಾಪಿಸಿ ಪ್ರಬಲ ಇಸ್ಲಾಮಿಕ್ ಸಂಘಟನೆಯೆಂದು ಹೆಸರು ಪಡೆದಿದೆ. ಒಂದು ಅಂದಾಜಿನ ಪ್ರಕಾರ ದೇಶಾದ್ಯಂತ ಅದಕ್ಕೆ ೮೦,೦೦೦ಕ್ಕೂ ಹೆಚ್ಚಿನ ಸದಸ್ಯರಿದ್ದಾರೆ. ಮುಸಲ್ಮಾನರ ಬಡತನ, ನಿರುದ್ಯೋಗ, ಸಾಮಾಜಿಕ ಮತ್ತು ಆರ್ಥಿಕ ಸಮಸ್ಯೆಗಳ ವಿರುದ್ಧ  ಪಿ.ಎಫ್.ಐ  ಹೋರಾಡುತ್ತದೆ ಎಂದು ಮುಸಲ್ಮಾನ ಮುಖಂಡರು ಹೇಳಿಕೊಳ್ಳುತ್ತಾರೆ. ಆದರೆ ಪಿ.ಎಫ್.ಐ ದೇಶಾದ್ಯಂತ  ಹಿಂದುಗಳ ವಿರುದ್ಧವಂತೂ ಹೋರಾಡುತ್ತಲೇ ಬಂದಿದೆ. ಅದರದ್ದು ಹತ್ತಾರು ಮುಖಗಳು, ನೂರಾರು ಉದ್ದೇಶಗಳು. ಆದರೆ ಎಲ್ಲಾ ಉದ್ದೇಶಗಳೂ ಹಿಂದುವನ್ನು ಹೇಗೆ ಮಟ್ಟಹಾಕಬೇಕು ಎನ್ನುವತ್ತಲೇ ಇರುತ್ತವೆ. ಆಯಾ ರಾಜ್ಯಕ್ಕೆ ತಕ್ಕಂತೆ ಅದು ವೇಷ ಬದಲಿಸುವುದರಲ್ಲೂ ಎತ್ತಿದ ಕೈ. ಗೋವಾದಲ್ಲಿ ಸಿಟಿಜನ್ಸ್ ಫೋರಂ, ರಾಜಸ್ಥಾನದಲ್ಲಿ ಕಮ್ಯುನಿಟಿ ಸೋಶಿಯಲ್ ಅಂಡ್ ಎಜುಕೇಶನ್ ಸೊಸೈಟಿ, ಪ.ಬಂಗಾಳದಲ್ಲಿ ನಾಗರಿಕ್ ಅಧಿಕಾರ್ ಸುರಕ್ಷಾ ಸಮಿತಿ, ಮಣಿಪುರದಲ್ಲಿ ಲಿಲೋಂಗ್ ಸೋಶಿಯಲ್ ಫೋರಂ, ಆಂಧ್ರ ಪ್ರದೇಶದಲ್ಲಿ ಅಸೋಸಿಯೇಶನ್ ಆಫ್ ಸೋಷಿಯಲ್ ಜಸ್ಟೀಸ್ ಮುಂತಾದ ಹೆಸರಿನಲ್ಲಿ ನಾನಾ ವೇಷಗಳನ್ನು ಹೊತ್ತು ಕಾರ್ಯಕ್ಕಿಳಿಯಿತು.
ಕರ್ನಾಟಕದಲ್ಲಿ  ಕೆ.ಎಫ್.ಡಿ ಆರಂಭದಲ್ಲಿ ಮೈಸೂರು ಮತ್ತು ಕೊಡಗು ಜಿಲ್ಲೆಗಳಲ್ಲಿ ತನ್ನ ಚಟುವಟಿಕೆಗಳನ್ನು ವಿಸ್ತಾರ ಮಾಡುವತ್ತ ಗಮನ ಹರಿಸಿತು. ಅದರ ಪರಿಣಾಮವಾಗಿ ಕೊಡಗಿನ ಸೋಮವಾರಪೇಟೆಯಲ್ಲಿ ಭಯೋತ್ಪಾದಕ ತರಬೇತಿಯನ್ನು ನೀಡಲಾರಂಭಿಸಿತು.  ಮೈಸೂರಿನ ಕ್ಯಾತಮಾರನಹಳ್ಳಿಯಲ್ಲಿ ಕೋಮುಗಲಭೆಯನ್ನು ವ್ಯವಸ್ಥಿತವಾಗಿ ಮಾಡಿ ಮುಗಿಸಿತ್ತು. ಹುಣಸೂರಿನ ಇಬ್ಬರು ಶಾಲಾ ಮಕ್ಕಳನ್ನು ಅಪಹರಿಸಿ ಕೊಲೆ ಮಾಡಿತು. ಅಷ್ಟಾಗುವ ಹೊತ್ತಿಗೆ ರಾಜ್ಯದಲ್ಲಿ ಕೆ.ಎಫ್.ಡಿಯನ್ನು  ನಿಷೇಧಿಸಬೇಕು ಎಂಬ ಕೂಗು ಕೇಳಿಬರತೊಡಿತು. ಅದರ ನಂತರ ಕೆ.ಎಫ್.ಡಿ ತನ್ನ ಚಟುವಟಿಕೆಗಳನ್ನು ತಾತ್ಕಾಲಿಕವಾಗಿ ನಿಲ್ಲಿಸಿತು. ಆದರೇನು? ಪಿಎಫ್‌ಐ ಹೆಸರಿನಲ್ಲಿ ‘ಚಳವಳಿ‘ಗಳು ನಡೆಯುವುದು ಮುಂದುವರಿಯಿತು.
ಪಿಎಫ್‌ಐ ಮಾನವ ಹಕ್ಕುಗಳ ಹಣೆಪಟ್ಟಿಯೊಂದಿಗೆ  ವೇದಿಕೆಗಳನ್ನು ಸೃಷ್ಟಿಸಿಕೊಂಡಿದೆ. ಅದು ಬೋಧಿಸುವ ಮಾನವ ಹಕ್ಕುಗಳಾದರೂ ಎಂಥದ್ದೆಂದರೆ ಗೋದ್ರಾದಲ್ಲಿ ಮುಸಲ್ಮಾನರನ್ನು ಕೊಲ್ಲಲಾಯಿತು ಎಂಬುದರಿಂದ ಹಿಡಿದು ಇರಾಕಿನಲ್ಲಿ ಸದ್ದಾಂ ಹುಸೇನನ್ನು  ಸರ್ವಾಧಿಕಾರಿ ದೇಶ ಅಮೆರಿಕಾ ಗಲ್ಲಿಗೇರಿಸಿತು ಎಂಬ ಅದೇ ಹಳಸಲು ಭಾಷಣ ಮಾಡುವ ಮಾನವ ಹಕ್ಕುಗಳು. ಬಾಂಬು ಇಡುವಷ್ಟೇ ಲಾಭಕರವಾದ ಕೆಲವು ಮಾರ್ಗಗಳನ್ನು ಪಿಎಫ್‌ಐ ಕಂಡುಕೊಂಡಿದೆ. ರಾಜೇಂದ್ರ ಸಾಚಾರ್ ವರದಿ ಮತ್ತು ರಂಗನಾಥ ಮಿಶ್ರಾ ವರದಿಯನ್ನು ಅನುಷ್ಠಾನಕ್ಕೆ ತರಬೇಕು ಎನ್ನುವ ಕೂಗನ್ನು ದೇಶಾದ್ಯಂತ ಎಬ್ಬಿಸಿದ್ದೇ  ಪಿಎಫ್‌ಐ. ದೇಶಾದ್ಯಂತ  ಮುಸಲ್ಮಾನರಿಗೆ ‘ಸ್ಕೂಲ್ ಚಲೋ’ ಅಭಿಯಾನ, ವರದಕ್ಷಿಣೆ ವಿರೋಧಿ ಚಳವಳಿಗಳನ್ನು ಮಾಡುತ್ತಾ ಪಿಎಫ್‌ಐಗೆ ದೇಶದ ಪ್ರಮುಖ ಸಾಮಾಜಿಕ ಚಳವಳಿಕಾರನ ಪಟ್ಟ ಸಿಕ್ಕೇಬಿಟ್ಟಿತು. ಯೋಗ ತರಗತಿಗಳನ್ನೂ ನಡೆಸಿತು! ‘ಎಜುಕೇಶನ್ ಫಾರ್ ಎಂಪ್ಲಾಯ್‌ಮೆಂಟ್’ ಎಂದು  ಹೋರಾಟ ನಡೆಸಿತು. ಹಿಂದಿನ ಯುಪಿಎ ಸರಕಾರ ಆ ಹೋರಾಟಕ್ಕೆ ಎಷ್ಟೊಂದು ಬೆಲೆ ಕೊಟ್ಟಿತು ಎಂದರೆ ಪ್ರತ್ಯೇಕ ಮುಸಲ್ಮಾನ ವಿಶ್ವದ್ಯಾಲಯವನ್ನೇ ತೆರೆಯುತ್ತೇವೆ ಎಂದಿತು. ಪರಿಸರ ಹೋರಾಟಗಾರನ ವೇಷ ಹಾಕಿತು, ಆರೋಗ್ಯ ರಕ್ಷಣೆ ಎಲ್ಲರ ಹೊಣೆ ಎಂದು ಘೋಷಣೆ ಹಾಕಿತು. ಎಲ್ಲದಕ್ಕೂ ಕೇಂದ್ರ ಸರಕಾರ ಬಗ್ಗಿತು. ವಿಶೇಷವೆಂದರೆ  ಪಿಎಫ್‌ಐನ ಎಲ್ಲಾ ಬೇಡಿಕೆಗಳನ್ನು ಸರಕಾರ ಮುಸಲ್ಮಾನರ ಆವಶ್ಯಕತೆ ಎಂದೇ ಪರಿಗಣಿಸಿತು. ಅಂದರೆ ಸರಕಾರ ಹಿಂದುಗಳ ಕೈಯಿಂದ ಕಿತ್ತುಕೊಂಡು ಅವರ ಕಣ್ಣೆದುರೇ ಸವಲತ್ತುಗಳನ್ನು ಮುಲ್ಮಾನರಿಗೆ ಕೊಟ್ಟಿತು.
ಇಂಥಾ  ಪಿಎಫ್‌ಐ ಹೋರಾಟಗಳನ್ನು , ಮೆರವಣಿಗೆಗಳನ್ನು ನಡೆಸುತ್ತಾ ಇದ್ದುಬಿಟ್ಟಿತೇ? ಖಂಡಿತಾ ಇಲ್ಲ. ಮುಸ್ಲಿಂ ಮತೀಯ ಹೆಸರಿನ ಸಂಘಟನೆ ರಕ್ತ ಹರಿಸದೇ ಬದುಕಲಾರದು ಎಂಬುದನ್ನು ಆಗಾಗ್ಗೆ  ಸಿದ್ಧಪಡಿಸುತ್ತಾ ಬಂತು. ಕೇರಳದ ಕಣ್ಣೂರಿನಲ್ಲಿ ಭಯೋತ್ಪಾದನಾ ತರಬೇತಿ ಶಿಬಿರವನ್ನು ನಡೆಸಿತು. ಪೊಲೀಸರು ಆ ಶಿಬಿರದ ಮೇಲೆ ದಾಳಿ ಮಾಡಿದಾಗ ನಾಡ ಬಾಂಬುಗಳು, ತಲವಾರುಗಳು, ಕಚ್ಚಾ ಬಾಂಬುಗಳು, ತಾಲೀಬಾನ್ ಪರ ಕರಪತ್ರಗಳು, ವಿದೇಶಿ ಫೋನ್ ನಂಬರುಗಳು ಪತ್ತೆಯಾದವು. ಕೇರಳದಲ್ಲಿ ಹಲವು ಆರೆಸ್ಸೆಸ್ ಮತ್ತು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ನ ಕಾರ್ಯಕರ್ತರ ಹತ್ಯೆಗಳನ್ನು ನಡೆಸಿತು. ಎಸ್‌ಎಂಎಸ್ ಮೂಲಕ ಸುಳ್ಳು ಸುದ್ಧಿಗಳು ಮತ್ತು ಹಿಂದೂ ದ್ವೇಷದ ಸುದ್ಧಿಗಳನ್ನು ಹರಡಲು ತೊಡಗಿತು. ಪಾಠ ಮಾಡಿದ ಮೇಷ್ಟ್ರರ ಕೈಯನ್ನೇ ಕತ್ತರಿಸಿತು.
 ಏಳು ವರ್ಷದ ಹಿಂದೆ ದೇಶದ ಆಯ್ದ ನಾಲ್ಕು ನಗರಗಳಲ್ಲಿ ‘ಫ್ರೀಡಂ ಪೆರೇಡ್’ ಹೆಸರಿನಲ್ಲಿ ರ್‍ಯಾಲಿಗಳನ್ನು ಪಿಎಫ್‌ಐ ಆಯೋಜಿಸಿತ್ತು. ಅದರಲ್ಲಿ ಕರ್ನಾಟಕದ ಮಂಗಳೂರು ಮತ್ತೊಂದು ಉಡುಪಿ ಕೂಡಾ ಸೇರಿತ್ತು. ಕರಾವಳಿಯಲ್ಲಿ ರಕ್ತ ಹರಿಸಲು ಅಡಿಗಲ್ಲು ಬಿದ್ದಿದ್ದು ಆಗಲೇ.
೨೦೦೮ರ ಆಗಸ್ಟ್ ೧೫. ಮಂಗಳೂರಿನಲ್ಲಿ ಫ್ರೀಡಂ ಪೆರೇಡ್ ಎಂಬ ಹೆಸರಿನಲ್ಲಿ ಪಿಎಫ್‌ಐ ಶಕ್ತಿ ಪ್ರದರ್ಶನವನ್ನು ನಡೆಸಿತು. ನಗರಾದ್ಯಂತ ಸೈನಿಕರಂತೆ ಸಮವಸ್ತ್ರ ಧರಿಸಿದ ಯುವಕರು ಪಥಸಂಚಲನ ನಡೆಸಿ ಮಂಗಳಾ ಸ್ಟೇಡಿಯಂನಲ್ಲಿ ಸಾರ್ವಜನಿಕ ಕಾರ್ಯಕ್ರಮ ನಡೆಸುವ ಉದ್ದೇಶವಿತ್ತು. ಹಿಂದೂ ಸಂಘಟನೆಗಳ ವಿರೋಧದಿಂದ ನಗರದ ರಸ್ತೆಗಳಲ್ಲಿ ಪಥಸಂಚಲನ ನಡೆಸಲು ಆಡಳಿತ ಅವಕಾಶ ಕೊಡಲಿಲ್ಲ. ಆದರೆ ಮಂಗಳಾ ಸ್ಟೇಡಿಯಂನಲ್ಲಿ ಕಾರ್ಯಕ್ರಮ-ಸಂಚಲನ ಎಲ್ಲವೂ ಸಾಂಗವಾಗಿ ನೆರವೇರಿದವು. ‘ಶಹೀದ್ ಭಗತ್ ಸಿಂಗ್ ವೇದಿಕೆ’ ಸಿದ್ಧಗೊಂಡಿತು. ಹೊರಜಿಲ್ಲೆಗಳಿಂದ ಮಂಗಳೂರಿಗೆ ಜನರು ಬಂದರು. ಭಾಷಣ ಮಾಡಲು ಉತ್ತರದ ರಾಜ್ಯದಿಂದ ಒಬ್ಬ ಬಂದಿದ್ದ. ಆತ ಕಾರಣವೇ ಇಲ್ಲದೆ ಹಿಂದೂಗಳನ್ನೂ, ಹಿಂದೂ ಸಂಘಟನೆಗಳನ್ನೂ ಬಾಯಿಗೆ ಬಂದಂತೆ ಬಯ್ಯಲಾರಂಭಿಸಿದ. ಸತ್ತು ಸ್ವರ್ಗದಲ್ಲಿರುವ ಸಾವರ್ಕರ್ ಅವರನ್ನೂ ಬಯ್ದ. ಮಂಗಳೂರು ಮುಂದೆ ಭಯಾನಕ ವಾತಾವರಣಕ್ಕೆ ತೆರೆದುಕೊಳ್ಳುತ್ತದೆ ಎಂಬುದಕ್ಕೆ ಮುನ್ಸೂಚನೆಯೂ ಆಗಲೇ ಸಿಕ್ಕಿಬಿಟ್ಟಿತ್ತು. ಅದಾದ ಕೆಲವು ತಿಂಗಳ ನಂತರ ಉಲ್ಲಾಳ ಸಮೀಪದ ಚೆಂಬುಗುಡ್ಡೆ ಎಂಬಲ್ಲಿ ಮನೆಯೊಂದರ ಮೇಲೆ ಪೊಲೀಸರು ದಾಳಿ ನಡೆಸಿದರು. ಅದಾಗಲೇ ಖಾಲಿಮಾಡಿದ್ದ ಆ ಮನೆಯಲ್ಲಿ ಬಾಂಬು ತಯಾರಿಸಲಾಗುತ್ತಿತ್ತು. ದೇಶದ ಮೋಸ್ಟ್ ವಾಂಟೆಡ್ ಉಗ್ರ ಯಾಸಿನ್ ಭಟ್ಕಳ ಅಲ್ಲಿ ವಾಸವಾಗಿದ್ದ ಎಂಬ ಸುದ್ಧಿ ರಾಜ್ಯವನ್ನು ಬೆಚ್ಚಿಬೀಳಿಸಿತ್ತು.ಅಂದು ಪಿ.ಎಫ್.ಐ ಹಾಕಿದ ಅಡಿಗಲ್ಲಿನ ಮೇಲೆ ಇಂದು ಕಟ್ಟಡವೆದ್ದಿದೆ. ಅನಂತರ ಪಿ.ಎಫ್.ಐ ಹಲವು ವೇದಿಕೆಗಳಲ್ಲಿ ಕಾಣಿಸಿಕೊಂಡಿದೆ. ಸಣ್ಣಪುಟ್ಟ ಸಂಗತಿಗಳಿಗೂ ಅದು ಸಮ್ಮೇಳನಗಳನ್ನು ಮಾಡುತ್ತಿವೆ. ಕರಾವಳಿ ಜಿಲ್ಲೆಯಾದ್ಯಂತ ಫುಟ್‌ಪಾತುಗಳ ಬದಿಗಳಲ್ಲೆಲ್ಲಾ ಅಮೆರಿಕಾ ಮತ್ತು ಇಸ್ರೇಲುಗಳನ್ನು ಬಯ್ಯುವ ಪೋಸ್ಟರುಗಳು ಕಾಣಿಸಿಕೊಳ್ಳಲಾರಂಭಿಸಿದವು. ವರದಕ್ಷಿಣೆ ವಿರೋಧಿ ಸಮಾವೇಶಗಳು ಸಾಮಾನ್ಯವಾದವು. ಕರಾವಳಿಯ ಬುದ್ಧಿಜೀವಿಗಳು ಅದಕ್ಕೆ ಮುಖ್ಯ ಅತಿಥಿಗಳಾಗಿ ಹೋಗಿ ಬಂದರು. ಇಷ್ಟೆಲ್ಲಾ ಮಾಡುವ ಪಿ.ಎಫ್.ಐ ಕರಾವಳಿಯಲ್ಲಿ ಹಲವಾರು ಪರಿವಾರ ಸಂಘಟನೆಗಳನ್ನು ಕೂಡ ಹುಟ್ಟಿಸಿದೆ. ಅವು ಕೂಡಾ ಹುಟ್ಟಿಸಿದಾತನನ್ನೇ ಮೀರಿಸುವಂಥಾ ಮತಾಂಧ ಸಂಘಟನೆಗಳು.
ಮುಂದೆ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದಾಗ ಇವು ಮತ್ತೆ ಚಿಗಿತುಕೊಂಡವು. ಕಾಂಗ್ರೆಸ್ ಈ ಮತಾಂಧ ಕ್ರಿಮಿಗಳಿಗೆ ಎಷ್ಟು ಬೆಂಬಲ ನೀಡಿತ್ತೆಂದರೆ ಬಹಿರಂಗವಾಗಿ ಅವನ್ನು ಬೆಂಬಲಿಸುವಷ್ಟು. ಕರಾವಳಿಯ ಮಂತ್ರಿಗಳೇ ಅವರನ್ನು ಸಮರ್ಥಿಸುವಷ್ಟು. ಮತಾಂಧರ ವಿರುದ್ಧ ಚಳವಳಿ ನಡೆಸುವ ವಿರೋಧ ಪಕ್ಷವನ್ನೇ ಅಡಗಿಸುವಷ್ಟು. ಮತಾಂಧರಿಗಾಗಿ ಬೈಕ್ ರ್‍ಯಾಲಿಯನ್ನೇ ನಿಷೇಧಿಸುವಷ್ಟು.

LEAVE A REPLY