ಗೌರಿ ಲಂಕೇಶ್ ಕೊಲೆ ಪ್ರಕರಣ: ಪ್ರಗತಿಪರರು, ಬುದ್ಧಿಜೀವಿಗಳಿಗೆ ಕೇಂದ್ರ ತರಾಟೆ

ಹೊಸದಿಲ್ಲಿ: ಪತ್ರಕರ್ತೆ ಗೌರಿ ಲಂಕೇಶ್ ಕೊಲೆಯ ಬಗ್ಗೆ ರಾಹುಲ್ ಗಾಂಧಿ ನೀಡಿರುವ ಹೇಳಿಕೆಗೆ ಕೇಂದ್ರ ಸರ್ಕಾರ ತಿರುಗೇಟು ನೀಡಿದೆ.
ಘಟನೆಯನ್ನು ರಾಜಕೀಯಗೊಳಿಸಬೇಡಿ ಎಂದು ಹೇಳಿರುವ ಕೇಂದ್ರ, ಕರ್ನಾಟಕದಲ್ಲಿರುವ ಕಾಂಗ್ರೆಸ್ ಸರ್ಕಾರ ಭದ್ರತೆ ನೀಡುವಲ್ಲಿ ವಿಫಲವಾಗಿದ್ದು ಏಕೆ ಎಂದು ಪ್ರಶ್ನಿಸಿದೆ.
ಗೌರಿ ಲಂಕೇಶ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ಕೇಂದ್ರ ಸಚಿವ ರವಿಶಂಕರ್ ಪ್ರಸಾದ್, ಭದ್ರತೆಯನ್ನು ಒದಗಿಸುವಲ್ಲಿ ಕರ್ನಾಟಕದ ಕಾಂಗ್ರೆಸ್ ಸರ್ಕಾರ ವಿಫಲವಾಗಿದ್ದು ಏಕೆ ಎಂದು ಪ್ರಶ್ನೆ ಮಾಡಿದ್ದಾರೆ. ನಕ್ಸಲರನ್ನು ಮುಖ್ಯವಾಹಿನಿಗೆ ತರುವಂತಹ ಹೋರಾಟ ಮಾಡುತ್ತಿದ್ದ ಬರಹಗಾರರಿಗೆ ಭದ್ರತೆಯನ್ನು ನೀಡುಬೇಕಿತ್ತು ಅಲ್ಲವೆ ಎಂದಿದ್ದಾರೆ.
ಪ್ರಮುಖ ಬಿಜೆಪಿ ನಾಯಕರೆಲ್ಲರೂ ಈ ಕೃತ್ಯವನ್ನು ಖಂಡಿಸಿzರೆ. ಹಾಗಿದ್ದರೂ ಕೆಲವೇ ಬಿಜೆಪಿ ನಾಯಕರ ವಿರುದ್ಧ ಉದ್ದೇಶಪೂರ್ವಕ ಅಪ ಪ್ರಚಾರ ನಡೆಸುತ್ತಿರುವುದು ಕಂಡುಬಂದಿದೆ. ಕೇರಳ ಮತ್ತು ಕರ್ನಾಟಕದಲ್ಲಿ ಆರೆಸ್ಸೆಸ್ ಕಾರ್ಯಕರ್ತರ ಬರ್ಬರ ಹತ್ಯೆಗಳು ನಡೆದಾಗ ಪ್ರಗತಿಪರರು ಹಾಗೂ ಬುದ್ಧಿಜೀವಿಗಳು ಮನವಾಗಿದ್ದಾದರೂ ಏಕೆ? ಎಂದು ಕೇಂದ್ರ ಸರ್ಕಾರ ಪ್ರಶ್ನೆ ಮಾಡಿದೆ.
ಇದೇ ಸಂದರ್ಭದಲ್ಲಿ ಇಂದ್ರಜಿತ್ ಲಂಕೇಶ್ ಹೇಳಿಕೆಯನ್ನು ಉಲ್ಲೇಖಿಸಿರುವ ಕೇಂದ್ರ, ತಮ್ಮ ಸೋದರಿ ನಕ್ಸಲರ ಶರಣಾಗತಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದರು. ಇದರಿಂದ ಬೆದರಿಕೆಗಳು ಇದ್ದವು ಎಂಬುದನ್ನು ಇಂದ್ರಜಿತ್ ಅವರೇ ಹೇಳಿದ್ದಾರೆ ಎಂದಿದೆ.
ಗೌರಿ ಲಂಕೇಶ್ ಅವರು ಈ ಚಟುವಟಿಕೆಗಳನ್ನು ರಾಜ್ಯ ಸರಕಾರದ ಅನುಮತಿ ಪಡೆದು ಮಾಡುತ್ತಿದ್ದರೆ? ಹಾಗಿದ್ದರೆ ಕರ್ನಾಟಕದ ಕಾಂಗ್ರೆಸ್ ಸರ್ಕಾರ ಅವರಿಗೆ ಸೂಕ್ತ ಭದ್ರತೆ ಒದಗಿಸಿಲ್ಲದಿದ್ದಿದ್ದು ಏಕೆ ಎಂದು ಪ್ರಶ್ನಿಸಿದೆ.
ತನ್ನನ್ನು ತಾನು ದೊಡ್ಡ ನಾಯಕ ಎಂದು ಕರೆದುಕೊಳ್ಳುವ ರಾಹುಲ್ ಗಾಂಧಿ, ಗೌರಿ ಕೊಲೆಯಲ್ಲಿ ಆರ್‌ಎಸ್‌ಎಸ್ ಕೈವಾಡವಿದೆ ಎಂದು ಹೇಳುವ ಮೂಲಕ ಪ್ರಕರಣವನ್ನು ರಾಜಕೀಯಗೊಳಿಸುತ್ತಿದ್ದಾರೆ ಎಂದಿದೆ. ರಾಹುಲ್ ವಿರುದ್ಧ ತೀಕ್ಷ್ಣ ವಾಗ್ದಾಳಿ ನಡೆಸಿದ ರವಿಶಂಕರ್ ಪ್ರಸಾದ್, ಗೌರಿ ಲಂಕೇಶ್ ಹತ್ಯೆಯಲ್ಲಿ ಆರೆಸ್ಸೆಸ್ ಮೇಲೆ ಗೂಬೆ ಕೂರಿಸಲು ಆ ಮಹಾನ್ ನಾಯಕ ಹವಣಿಸುತ್ತಿzರೆ. ತನಿಖೆ ಆರಂಭವಾಗುವುದಕ್ಕೂ ಮೊದಲೇ, ಯಾವುದೇ ಪೂರ್ವ ಸಿದ್ಧತೆಯಿಲ್ಲದೆ ಮಾತನಾಡಿರುವ ರಾಹುಲ್ ಗಾಂಧಿ, ಈ ಕೃತ್ಯದಲ್ಲಿ ಆರೆಸ್ಸೆಸ್ ಮತ್ತು ಬಲಪಂಥೀಯ ಗುಂಪುಗಳು ಭಾಗಿಯಾಗಿವೆ ಎಂದು ಸಾರ್ವಜನಿಕವಾಗಿ ಆರೋಪ ಮಾಡುತ್ತಾರೆ. ಅಪರಾಧಿ ಯಾರು ಎಂಬ ತೀರ್ಪನ್ನೂ ಅವರೇ ನೀಡಿಬಿಟ್ಟಿzರೆ. ಇಂತಹ ದುರುದ್ದೇಶಪೂರಿತ ಹೇಳಿಕೆಗಳನ್ನು ನೀಡುವ ನಾಯಕನ ಅಧೀನದಲ್ಲಿರುವ ಕರ್ನಾಟಕದ ಕಾಂಗ್ರೆಸ್ ಸರಕಾರದಿಂದ ಯಾವ ಬಗೆಯ ನಿಷ್ಪಕ್ಷಪಾತ ತನಿಖೆಯನ್ನು ನಿರೀಕ್ಷಿಸಲು ಸಾಧ್ಯ ಎಂದಿದ್ದಾರೆ.
ಪ್ರಗತಿಪರರು, ಬುದ್ಧಿಜೀವಿಗಳಿಗೂ ತರಾಟೆ
ಗೌರಿ ಲಂಕೇಶ್ ಹತ್ಯೆ ಖಂಡಿಸಿದ ಪ್ರಗತಿಪರರು ಮತ್ತು ಬುದ್ಧಿಜೀವಿಗಳ ಬೂಟಾಟಿಕೆ ಮತ್ತು ದ್ವಂದ್ವ ನಿಲುವುಗಳನ್ನು ಕೇಂದ್ರ ತರಾಟೆಗೆ ತೆಗೆದುಕೊಂಡಿದೆ. ಅವರೆಲ್ಲ ನಮಗೆ ಉದಾರವಾದಿ ಮಲ್ಯಗಳ ಬಗ್ಗೆ ಬೋಧನೆ ಮಾಡುವವರು. ಪತ್ರಕರ್ತೆಯ ಹತ್ಯೆ ಬಗ್ಗೆ ಅದು ಹೇಗೆ ಒಂದೇ ಧಾಟಿಯಲ್ಲಿ ಬರೆದುಕೊಟ್ಟ ಭಾಷಣದಂತೆ ಹೇಳಿಕೆ ನೀಡುತ್ತಿzರೆ. ಆರೆಸ್ಸೆಸ್ ಮತ್ತು ಬಿಜೆಪಿ ಕಾರ್ಯಕರ್ತರ ಹತ್ಯೆ ನಡೆದಾಗ ಮನವಾಗಿರುವುದೂ ಇವರ ಸಂಚಿನ ಭಾಗವೆ ಎಂದು ಪ್ರಶ್ನೆ ಮಾಡಿದೆ.

LEAVE A REPLY