ಭವಿಷ್ಯದಲ್ಲಿ ಅಗತ್ಯ ಬಿದ್ದರೆ  ಎಲ್‌ಒಸಿ ದಾಟಿ ದಾಳಿಗೆ ಸಿದ್ಧ : ಲೆ. ಜ. ಡಿ. ಅಂಬು

ಜಮ್ಮು: ಭವಿಷ್ಯತ್ತಿನಲ್ಲಿ ಅಗತ್ಯವೆನಿಸಿದ ಸಂದರ್ಭದಲ್ಲಿ ಶತ್ರು ವಿರುದ್ಧ ಎಲ್‌ಒಸಿಯನ್ನು ದಾಟಿ ಭಾರತೀಯ ಸೇನೆ ದಾಳಿ ನಡೆಸಲಿದೆ ಎಂದು ಉತ್ತರ ಕಮಾಂಡಿನ ಮುಖ್ಯಸ್ಥರಾದ ಲೆ. ಜ. ಡಿ. ಅಂಬು ಗುರುವಾರ ಹೇಳಿದ್ದಾರೆ.
ನಮಗೆ ಬೇಕೆಂದಾಗ ನಿಯಂತ್ರಣ ರೇಖೆ (ಎಲ್‌ಒಸಿ) ದಾಟಿ ಅತಿಕ್ರಮಿಸಲು ನಾವು ಸಮರ್ಥರಿದ್ದೇವೆ. ಶತ್ರು ದೇಶಕ್ಕೆ ಭಾರತೀಯ ಸೇನೆ ಬಗ್ಗೆ ಕೀಳರಿಮೆ ಬೇಡ. ಎಲ್‌ಒಸಿ ನಮ್ಮ ಸೇನೆಗೆ ದಾಟಲಾಗದ ಗಡಿರೇಖೆಯೂ ಅಲ್ಲ ಎಂದರು.
ಕಳೆದ ವರ್ಷದ ಸರ್ಜಿಕಲ್ ದಾಳಿ ಸೇನಾ ಪಡೆಯ ಅಭೂತಪೂರ್ವ ಕ್ರಮ. ತನ್ಮೂಲಕ ಶತ್ರು ದೇಶಕ್ಕೆ ನಮ್ಮ ತಾಕತ್ತಿನ ಸಂದೇಶ ಮುಟ್ಟಿಸಿದ್ದೆವು ಎಂದು ಲೆ. ಜ. ಅಂಬು ತಿಳಿಸಿದರು. ಉಧಾಂಪುರ್‌ನಲ್ಲಿ ಅವರು ಮೇಲಿನ ಹೇಳಿಕೆ ನೀಡಿದ್ದರು.
ಗಡಿಯಾಚೆಯಿಂದ ಉಗ್ರರ ನುಸುಳುವಿಕೆ ತಡೆವಲ್ಲಿ ಸಶಸ್ತ್ರ ಪಡೆಗಳು ಸಮರ್ಥವೆನಿಸಿವೆ ಎಂದು ಶ್ಲಾಘಿಸಿದ ಲೆ. ಜ. ಅಂಬು ಅಪಾರ ಸಂಖ್ಯೆಯ ಉಗ್ರರು ಭದ್ರತಾ ಪಡೆಗಳಿಂದ ಹಂತರಾಗಿದ್ದು, ಪ್ರಸಕ್ತ ಒಳನುಸುಳುವಿಕೆಯೂ ತಗ್ಗಿದೆ. ಏಕೆಂದರೆ ಈ ಕೃತ್ಯದಲ್ಲಿ ತಾವು ಯಶಸ್ವಿ ಆಗೆವೆಂಬುದು ಉಗ್ರರಿಗೆ ಖಚಿತವಾಗಿದೆ ಎಂದು ಲೆ. ಜ. ಅಂಬು ನುಡಿದರು. ಕಳೆದ ವರ್ಷ ನ. 30ಕ್ಕೆ ಲೆ. ಜ. ಹೂಡಾ ನಿವೃತ್ತರಾದ ನಂತರ ಸದ್ಯ ಲೆ. ಜ. ಅಂಬು ಉತ್ತರ ಕಮಾಂಡ್‌ಗೆ ಮುಖ್ಯಸ್ಥರಾಗಿದ್ದಾರೆ.

LEAVE A REPLY