ಬಿಜೆಪಿ ಪ್ರತಿಭಟನಾ ಜಾಥಾದ ಹಿಂದೆಯೇ ನಡೆಯಿತು ಕಾರ್ಯಕರ್ತರ ಸ್ವಚ್ಛತಾ ಆಂದೋಲನ!

ಮಂಗಳೂರು: ರಾಜ್ಯದಲ್ಲಿ ನಡೆದಿರುವ ಹತ್ಯಾ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾಗೂ ಕರಾವಳಿ ಜಿಲ್ಲೆಯಲ್ಲಿ ಅಶಾಂತಿ ಸೃಷ್ಟಿಸುವ ಸಂಘಟನೆಗಳ ನಿಷೇಧಕ್ಕೆ ಆಗ್ರಹಿಸಿ ನಡೆದ ಮಂಗಳೂರು ಚಲೋ ಪ್ರತಿಭಟನೆ ಶಾಂತಿಯುತವಾಗಿ ಮಾತ್ರವಲ್ಲದೆ ಇತರ ಪ್ರತಿಭಟನೆಗಳಿಗೆ ಮಾದರಿಯಾಗಿಯೂ ಕಂಡುಬಂತು.
ಸರಕಾರದ ನಿಷೇಧ, ಸೆಕ್ಷನ್ ಜಾರಿ ಹೊರತಾಗಿಯೂ ಇಂದು ಬಿಜೆಪಿ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕರಾವಳಿ ಭಾಗದಿಂದ ಸರಕಾರಕ್ಕೆ ಬಿಸಿ ಮುಡ್ಡಿಸಿದರು.
ಶಹಬ್ಬಾಸ್
ಒಂದೆಡೆ ಪಾದಯಾತ್ರೆ ಮುಂದೆ ಮುಂದೆ ತೆರಳುತ್ತಿದ್ದರೆ, ಇನ್ನೊಂದೆಡೆ ಬಿಜೆಪಿ ಕಾರ್ಯಕರ್ತರು ಪಾದಯಾತ್ರೆ ತೆರಳಿದ ದಾರಿಯಲ್ಲಿ ಕಸಕಡ್ಡಿ ಹೆಕ್ಕುವ ಮೂಲಕ ಸ್ವಚ್ಛತೆಗೆ ಪತ್ತು ನೀಡುತ್ತಿದ್ದುದು ಕಂಡುಬಂತು. ಸಾಮಾನ್ಯವಾಗಿ ಪ್ರತಿಯೊಂದು ಪ್ರತಿಭಟನೆ ನಡೆದ ಬಳಿಕ ಕಸಕಡ್ಡಿಗಳಿಂದ ನಗರ ತುಂಬಿ ಹೋಗುತ್ತಿತ್ತಲ್ಲದೆ ಪ್ರತಿಭಟನೆ ಆಯೋಜಕರೂ ಈ ಬಗ್ಗೆ ಗಮನಹರಿಸುತ್ತಿರಲಿಲ್ಲ. ಆದರೆ ಇಂದು ನಡೆದ ಮಂಗಳೂರು ಚಲೋ ಪ್ರತಿಭಟನೆಯಲ್ಲಿ ಸ್ವಚ್ಛತೆಗೂ ಒತ್ತು ಸಿಕ್ಕಿದ್ದು, ನಗರವಾಸಿಗಳ ಶಹಬ್ಬಾಸ್ ಗಿರಿಗೆ ಕಾರಣವಾಗಿದೆ.

LEAVE A REPLY