ರಾಜ್ಯ ಸರಕಾರ ಮತಾಂಧ ಸಂಘಟನೆ ನಿಷೇಧಿಸಲಿ: ಸಂಸದ ನಳಿನ್ ಒತ್ತಾಯ

ಮಂಗಳೂರು: ರಾಜ್ಯದಲ್ಲಿ ಒಟ್ಟಾರೆ 11 ಕ್ಕೂ ಹೆಚ್ಚು ಹಿಂದೂ ಕಾರ್ಯಕರ್ತರ ಹತ್ಯೆಯಾಗಿದೆ. ಇದೆಲ್ಲದರ ಹಿಂದೆ ಮತಾಂಧ ಸಂಘಟನೆಗಳ ಕೈವಾಡ ಇರುವುದು ಕೂಡಾ ಬೆಳಕಿಗೆ ಬಂದಿದೆ. ಹಾಗಿದ್ದರೂ ಆರೋಪಿಗಳ ಬಂಧನ ಆಗಿಲ್ಲ, ಇಂತಹ ಮತಾಂಧ ಸಂಘಟನೆಯನ್ನು ನಿಷೇಧಿಸಿಲ್ಲ, ಅದರ ಬದಲಾಗಿ ಹಿಂದೂಗಳ ಮೇಲೆಯೇ ದಮನ ನೀತಿ ಅನುಸರಿಸುವ ಕೆಲಸ ರಾಜ್ಯ ಸರಕಾರ ಮಾಡುತ್ತಿದೆ ಎಂದು ಸಂಸದ ನಳಿನ್ ಕುಮಾರ್ ಕಟೀಲು ಹೇಳಿದ್ದಾರೆ.
ಅವರು ಮಂಗಳೂರು ಚಲೋ ಕಾರ್ಯಕ್ರಮದಲ್ಲಿ ಮಾತನಾಡಿದರು.ಕರಾವಳಿ ಜಿಲ್ಲೆಯಲ್ಲಿ ಗೋಹಂತಕರು ರಾಜಾರೋಷವಾಗಿ ತಿರುಗುತ್ತಿದ್ದಾರೆ, ಅಲ್ಲಲ್ಲಿ ಪಿಎಫ್ ಐ ಹಾಗೂ ಮತಾಂಧ ಸಂಘಟನೆಗಳು ಸಮಾಜದ್ರೋಹಿ ಕೆಲಸ ಮಾಡುತ್ತಿದ್ದರೂ ಹಿಂದೂಗಳ ಮೇಲೆಯೇ ಈ ಸರಕಾರ ಸುಲ್ಳು ಕೇಸು ದಾಖಲು ಮಾಡುತ್ತಿದೆ. ಹೀಗಾಗಿ ಈ ಕೂಡಲೇ ಮತಾಂಧ ಸಂಘಟನೆಗಳ ನಿಷೇಧ ಮಾಡಿ ಇಲ್ಲದೇ ಇದ್ದರೆ ಯಡಿಯೂರಪ್ಪ ನೇತೃತ್ವದಲ್ಲಿ ನಿಷೇಧ ಮಾಡಲು ಕ್ರಮ ಕೈಗೊಳ್ಳಲಾಗುವುದು  ಎಂದರು.

LEAVE A REPLY