ಮಾಂಸ ಜಾಹೀರಾತಲ್ಲಿ ಗಣೇಶ; ಆಸಿಸ್ ಹಿಂದೂಗಳ ಆಕ್ರೋಶ

ಮೆಲ್ಬೋರ್ನ್: ಕುರಿ ಮರಿ ಮಾಂಸವನ್ನು ಪ್ರಚಾರ ಮಾಡಲು ಆಸ್ಟ್ರೇಲಿಯಾದ ಎಂಎಲ್‌ಎ ಎಂಬ ಕಂಪೆನಿ ಮಾಡಿದ ವಿವಾದಾತ್ಮಕ ಜಾಹೀರಾತಿನಲ್ಲಿ ಹಿಂದೂ ದೇವರು ಗಣಪತಿಯನ್ನು ತೊರಿಸಲಾಗಿದೆ.
ಆಸ್ಟ್ರೇಲಿಯಾ ಮತ್ತು ಸಾಗರೋತ್ತರ ರಾಷ್ಟ್ರಗಳಲ್ಲಿ ನೆಲೆಸಿರುವ ಹಿಂದೂ ಸಮುದಾಯ ಈ ಜಾಹೀರಾತಿನ ವಿರುದ್ಧ ತೀವ್ರವಾಗಿ ಖಂಡನೆ ವ್ಯಕ್ತಪಡಿಸಿವೆ. ಆಸ್ಟ್ರೇಲಿಯಾದ ಹಿಂದೂ ಸಮಾಜ ಈ ಜಾಹೀರಾತು ವಿರುದ್ಧ ಕಾನೂನು ಸಮರಕ್ಕೆ ಹೊರಟಿದೆ. ಈ ಜಾಹೀರಾತು ನಿಷೇಸುವಂತೆ ಆಸ್ಟ್ರೇಲಿಯಾದ ಹಿಂದೂ ಸಮುದಾಯ ಆಗ್ರಹಿಸಿದೆ.
ಈ ವಿವಾದಿತ ಜಾಹೀರಾತನ್ನು ಸೆ.೪ರಂದು ಬಿಡುಗಡೆ ಮಾಡಲಾಗಿತ್ತು. ಇದನ್ನು ಮೀಟ್ ಆಂಡ್ ಲೈವ್‌ಸ್ಟಾಕ್ ಆಸ್ಟ್ರೇಲಿಯಾ (ಎಂಎಲ್‌ಎ) ಈ ಹಿಂದೆಯೇ ಆಸ್ಟ್ರೇಲಿಯಾ ಗುಣಮಟ್ಟ ಬ್ಯೂರೋ ಅನುಮತಿ ಮೇರೆಗೆ ಬಿಡುಗಡೆ ಮಾಡಿದೆ ಎನ್ನಲಾಗಿದೆ. ಹಿಂದೂ ದೇವರು ಗಣೇಶ ಮತ್ತು ಇತರೆ ದೇವರುಗಳನ್ನು ಕುರಿ ಮರಿ ಮಾಂಸ ತಿನ್ನುವಂತೆ ತೋರಿಸದ ವಿವಾದಾತ್ಮಕ ಜಾಹೀರಾತನ್ನು ನಿಷೇಧಿಸುವಂತೆ ಆಸ್ಟ್ರೇಲಿಯಾ ಹಿಂದೂ ಸಮುದಾಯದ ವಕ್ತಾರ ನಿತಿನ್ ವಶಿಷ್ಟ ಬೇಡಿಕೆ ಇಟ್ಟಿದ್ದಾರೆ. ಜಾಹೀರಾತಿನಲ್ಲಿ ಹಿಂದೂ ದೇವರು ಗಣೇಶನ ಜೊತೆ ಏಸುಕ್ರಿಸ್ತ, ಬುದ್ಧ, ಥೋರ್ ಮತ್ತು ಜೀಯಸ್ ಮೊದಲಾದ ದೇವತೆಗಳನ್ನು ಕುರಿ ಮಾಂಸ ತಿನ್ನುವಂತೆ ತೋರಿಸಲಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಈ ಜಾಹೀರಾತಿಗೆ ಜನರು ತೀವ್ರ ವಿರೋಧವನ್ನು ವ್ಯಕ್ತಪಡಿಸಿದ್ದಾರೆ.

LEAVE A REPLY