ಜಾಗತಿಕ ದಾಖಲೆ: ಮುಖೇಶ್ ಅಂಬಾನಿ ಜಿಯೋ ಗ್ರಾಹಕರ ಸಂಖ್ಯೆ 13 ಕೋಟಿ

ಹೊಸದಿಲ್ಲಿ: ರಿಲಯನ್ಸ್ ಜಿಯೋ ಭಾರತದಲ್ಲಿ ಮಾತ್ರ ಹಲವು ದಾಖಲೆಗಳನ್ನು ಮಾಡಿದ್ದಲ್ಲದೇ, ಮಾರುಕಟ್ಟೆಗೆ ಪರಿಚಯವಾದ ಒಂದು ವರ್ಷದಲ್ಲಿಯೇ ಜಾಗತಿಕವಾಗಿ 13 ಕೋಟಿ ಗ್ರಾಹಕರ ಸಂಖ್ಯೆಯನ್ನು ತಲುಪುವ ಮೂಲಕ ದಾಖಲೆ ಸೃಷ್ಟಿಸಿದೆ ಎಂದು ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ, ಎಂಡಿ ಮುಖೇಶ್ ಅಂಬಾನಿ  ಹೇಳಿದ್ದಾರೆ.
ಕಳೆದ ಒಂದು ವರ್ಷದಲ್ಲಿ, ನಾವು ದೇಶದಲ್ಲಿಯೂ ಮತ್ತು ಜಾಗತಿಕವಾಗಿಯೂ ಹಲವು ದಾಖಲೆಗಳನ್ನು ಮುರಿದಿದ್ದೇವೆ. ಆದರೆ ಭಾರತ ಮುಂದುವರಿದ ತಂತ್ರಜ್ಞಾನವನ್ನು ಸ್ವೀಕರಿಸಲು ತಯಾರಿರುವುದಿಲ್ಲ ಎಂಬ ಸುಳ್ಳನ್ನು ಮುರಿದಿದ್ದು ನನಗೆ ಅತೀ ದೊಡ್ಡ ವೈಯಕ್ತಿಕ ತೃಪ್ತಿ ನೀಡಿದೆ ಎಂದು ಜಿಯೋ ನೌಕರರಿಗೆ ಬರೆದ ಪತ್ರದಲ್ಲಿ ಅಂಬಾನಿ ಹೇಳಿದ್ದಾರೆ.
ಸೆ.5, 2016ರಂದು ರಿಲಯನ್ಸ್ ಜಿಯೋ ಮಾರುಕಟ್ಟೆಗೆ ಪರಿಚಯಿಸಲಾಗಿತ್ತು. 90 ದಿನಗಳ ಕಾಲ ಉಚಿತ ಅನಿಯಮಿತ 4ಜಿ ಇಂಟರ್‌ನೆಟ್, ಉಚಿತ ಅನಿಯಮಿತ ವಾಯ್ಸ್ ಕಾಲ್ ಸೌಲಭ್ಯ ಮತ್ತು ರೋಮಿಂಗ್ ವೇಳೆ ಹೆಚ್ಚುವರಿ ವೆಚ್ಚವಿಲ್ಲದೇ ಸೇವೆಗಳೊಂದಿಗೆ ಜಿಯೋ ಮಾರುಕಟ್ಟೆಗೆ ಪರಿಚಯವಾಗಿತ್ತು. ಆ ತಿಂಗಳಲ್ಲಿ ದೇಶದ ಟೆಲಿಕಾಂ ವಲಯ ಅತೀ ಹೆಚ್ಚು ಚಂದಾದಾರರನ್ನು ಪಡೆಯಿತು.

LEAVE A REPLY