ಅಂಡಮಾನ್‌ನಲ್ಲಿ ಕಂಪಿಸಿದ ಭೂಮಿ: 5.2 ತೀವ್ರತೆಯ ಭೂಕಂಪ ದಾಖಲು

ಪೋರ್ಟ್‌ಬ್ಲೇರ್: ಅಂಡಮಾನ್, ನಿಕೋಬಾರ್ ದ್ವೀಪದಲ್ಲಿ ಇಂದು ಮುಂಜಾನೆ ಭೂಕಂಪನದ ಅನುಭವವಾಗಿದೆ.
ಭೂಕಂಪನದ ತೀವ್ರತೆ ರಿಕ್ಟರ್ ಮಾಪಕದಲ್ಲಿ 5.2ರಷ್ಟು ದಾಖಲಾಗಿದ್ದು, ಯಾವುದೇ ಅಪಾಯ ಸಂಭವಿಸಿಲ್ಲ ಎಂದು ತಿಳಿದುಬಂದಿದೆ. ಪೋರ್ಟ್ ಬ್ಲೇರ್‌ನಿಂದ ಸುಮಾರು 86 ಕಿ ಮೀ. ವ್ಯಾಪ್ತಿಯಲ್ಲಿ ಭೂಮಿ ಕಂಪಿಸಿದ ಅನುಭವ ಉಂಟಾಗಿದೆ ಎಂದು ಸ್ಥಳೀಯ ಸುದ್ದಿ ಸಂಸ್ಥೆಗಳು ವರದಿ ಮಾಡಿವೆ.
ಕಳೆದ ತಿಂಗಳಿನಲ್ಲಿಯೂ ಇಲ್ಲಿ ರಿಕ್ಟರ್ ಮಾಪಕದಲ್ಲಿ 5.0 ರಷ್ಟು ತೀವ್ರತೆಯ ಭೂಕಂಪ ದಾಖಲಾಗಿತ್ತು. ಸುಮಾರು 10 ಕಿ ಮೀ ವ್ಯಾಪ್ತಿಯವರೆಗೂ ಭೂಮಿ ಕಂಪಿಸಿತ್ತು.

LEAVE A REPLY