ದೇಶದ ಶಿಕ್ಷಕ, ಶಿಕ್ಷಣ ಸಮುದಾಯಕ್ಕೆ ಶುಭಾಶಯ ಕೋರಿದ ಪ್ರಧಾನಿ

ನವದೆಹಲಿ: ಪ್ರಸ್ತುತ ಚೀನಾ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರು, ಮಾಜಿ ರಾಷ್ಟ್ರಪತಿ ಡಾ. ಸರ್ವೆಪಲ್ಲಿ ರಾಧಾಕೃಷ್ಣನ್ ಅವರ ಜನ್ಮದಿನಾಚರಣೆ ಸಂದರ್ಭ ದೇಶದ ಶಿಕ್ಷಕ ಸಮುದಾಯಕ್ಕೆ ಟ್ವಿಟರ್ ಮೂಲಕ ಶುಭಾಷಯ ಹೇಳಿದ್ದಾರೆ.
ನವ ಭಾರತ ನಿರ್ಮಾಣದ ಕನಸನ್ನು ನನಸು ಮಾಡುವಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದು ಎಂದಿರುವ ಅವರು, ಈ ದಿನದಂದು ನಾನು ಶಿಕ್ಷಣ ಸಮುದಾಯಕ್ಕೆ ನಮಿಸುತ್ತೇನೆ. ಶಿಕ್ಷಣದ ಮೂಲಕ ಜ್ಞಾನವನ್ನು ಪೋಷಿಸುತ್ತಾ ಸುಶಿಕ್ಷಿತ ಸಮಾಜ ನಿರ್ಮಾಣಕ್ಕಾಗಿ ತಮ್ಮನ್ನು ಸಮರ್ಪಿಸಿಕೊಂಡಿರುವ ಶಿಕ್ಷಕರನ್ನು ನಾನು ಅಭಿನಂದಿಸುತ್ತೇನೆ ಎಂದು ಹೇಳಿದ್ದಾರೆ. ಮುಂಬರುವ ಐದು ವರ್ಷಗಳಲ್ಲಿ ಬೋಧನೆಯಿಂದ ಪರಿವರ್ತನೆಗೆ, ಶಿಕ್ಷಣದಿಂದ ಸಬಲೀಕರಣದೆಡೆಗೆ ಹಾಗೂ ಕಲಿಕೆಯಿಂದ ಮುನ್ನಡೆಗೆ ಎಂಬ ಧ್ಯೇಯಗಳು ಸಾಕಾರಗೊಳ್ಳಬೇಕೆಂಬ ಆಶಯವನ್ನು ಪ್ರಧಾನಿ ಇದೇ ಸಂದರ್ಭ ವ್ಯಕ್ತಪಡಿಸಿದ್ದಾರೆ.

LEAVE A REPLY