ಧಾರವಾಡದಲ್ಲಿ ಪೊಲೀಸ್ ಭದ್ರತೆಯಲ್ಲಿ ಆರಂಭಗೊಂಡ ’ಮಂಗಳೂರು ಚಲೋ’

ಧಾರವಾಡ: ದುಷ್ಟಶ ಶಕ್ತಿಗಳ ಮಟ್ಟ ಹಾಕುವಂತೆ ಬಿಜೆಪಿ ರಾಜ್ಯ ಯುವ ಮೋರ್ಚಾ ಕರೆ ನೀಡಿದ ’ಮಂಗಳೂರು ಚಲೋ’ ಬೈಕ್ ಜಾಥಾಗೆ ಶಾಸಕ ಅರವಿಂದ ಬೆಲ್ಲದ ಹಸಿರು ನಿಶಾನೆ ತೋರಿದರು.
ನಗರದ ಕಲಾ ಭವನದಿಂದ ಆರಂಭಗೊಂಡ ಜಾಥಾ, ಪೊಲೀಸ್ ಭದ್ರತೆಯಲ್ಲಿ ವಿವಿಧ ವೃತ್ತಗಳ ಮೂಲಕ ಹುಬ್ಬಳ್ಳಿ ತನಕ ಸಾಗಿತು. ಚಾಲನೆ ನೀಡಿದ ಶಾಸಕ ಅರವಿಂದ ಬೆಲ್ಲದ, ರಾಜ್ಯದಲ್ಲಿ ದೇಶದ್ರೋಹಿ ಚಟುವಟಿಕೆ ನಡೆಸುವ ದುಷ್ಟಶಕ್ತಿ ಮಟ್ಟ ಹಾಕಲು ಆಗ್ರಹಿಸಿದರು. ರಾಜ್ಯದಲ್ಲಿ ಹಿಂದುಪರ ಸಂಘಟನೆ ಕಾರ್ಯಕರ್ತರ ಹತ್ಯೆ ಮಾಡುವ ಸಂಘಟನೆಗಳನ್ನು ನೀಷೇಧಿಸುವ ಬದಲು ಸರ್ಕಾರ ಜಾಥಾ ಹತ್ತಿಕ್ಕುವ ಹುನ್ನಾರ ನಡೆಸುತ್ತಿದೆ ಎಂದು ದೂರಿದರು. ಬಿಜೆಪಿ ಜಾಥಾ ಬಿಸಿ ಕಾಂಗ್ರೆಸ್ ಸರ್ಕಾರಕ್ಕೆ ತಟ್ಟಿದ್ದರಿಂದ ಇದನ್ನು ಹತ್ತಿಕ್ಕುವ ಹುನ್ನಾರ ನಡೆಸಿದೆ. ಕಾಂಗ್ರೆಸ್ ಮುಂದೆ ತಕ್ಕಪಾಠ ಕಲಿಸಲಿದೆ ಎಂದರು.

LEAVE A REPLY