ಪೂಂಜ ಶ್ರೀ ಪಂಚದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಕಳ್ಳರ ಲಗ್ಗೆ

ಬೆಳ್ತಂಗಡಿ: ತಾಲೂಕಿನ ಪೂಂಜ ಶ್ರೀ ಪಂಚದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಕಳ್ಳರು ನುಗ್ಗಿದ್ದು, ಕಾಣಿಕೆ ಡಬ್ಬಿಯಲ್ಲಿದ್ದ ಹಣ ದೋಚಿದ್ದಾರೆ.
ರಾತ್ರಿ 7 ಗಂಟೆಗೆ ಪೂಜೆ ಮುಗಿಸಿ ಅರ್ಚಕರು ಬಾಗಿಲು ಹಾಕಿ ತೆರಳಿದ್ದು, ಮರುದಿನ ಬೆಳಗ್ಗೆ ಅರ್ಚಕರು ಬಂದು ಗಮನಿಸಿದಾಗ ಗರ್ಭ ಗುಡಿಯ ಮುಂಭಾಗದ ಬೃಹದಾಕಾರದ ಕಾಣಿಕೆ ಹುಂಡಿಯ ಬೀಗ ಮುರಿದು ಹಣವನ್ನು ಕದ್ದೊಯ್ದಿರುವುದು ಕಂಡು ಬಂದಿದೆ. ದೇವಸ್ಥಾನದ ಸುತ್ತ ೮ ಸಿಸಿಟಿವಿಗಳನ್ನು ಅಳವಡಿಸಲಾಗಿದ್ದು, ಸಿಸಿಟಿವಿ ತಿರುಗಿಸಿ ಕಳ್ಳರು ಕೈಚಳಕ ಪ್ರದರ್ಶಿಸಿದ್ದಾರೆ. ಕಾಣಿಕೆ ಡಬ್ಬಿಯಿಂದ ಸುಮಾರು ೭ ಸಾವಿರ ಹಾಗೂ ೮ ಸಾವಿರ ಮೌಲ್ಯದ ಸಿಸಿಟಿವಿ ಕದ್ದೊಯ್ದಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.
ಕಳ್ಳರ ದೃಶ್ಯಾವಳಿ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸ್ಥಳೀಯರ ಕೃತ್ಯವಿರಬಹುದೆಂದು ಅಂದಾಜಿಸಲಾಗಿದ್ದು, ಸಂಜೆಯ ವೇಳೆಗೆ ಪೊಲೀಸರಿಗೆ ಮಹತ್ವರ ಮಾಹಿತಿ ಲಭ್ಯವಾಗಿದೆ ಎಂದು ತಿಳಿದು ಬಂದಿದೆ. ವೇಣೂರು ಪೊಲೀಸ್ ಉಪನಿರೀಕ್ಷಕ ಚಂದ್ರಶೇಖರ ಕೆ. ಹಾಗೂ ಸಿಬ್ಬಂದಿ ಸ್ಥಳಕ್ಕೆ ದಾವಿಸಿ ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಮುಂದುವರಿಸಿದ್ದಾರೆ.

LEAVE A REPLY