ಮಂಗಳೂರು ಚಲೋ ನಡೆಸಿಯೇ ಸಿದ್ಧ, ಸಾಮರ್ಥ್ಯವಿದ್ದರೆ ಸರಕಾರ ತಡೆಯಲಿ: ನಳಿನ್

file photo

ಮಂಗಳೂರು: ಮಂಗಳೂರು ನಗರದಲ್ಲಿ ಬಿಜೆಪಿ ಯುವ ಮೋರ್ಚಾ ನಡೆಸಲು ಉದ್ದೇಶಿಸಿದ ಮಂಗಳೂರು ಚಲೋಗೆ ಅನುಮತಿ ನಿರಾಕರಿಸಿರುವ ಬಗ್ಗೆ ಸಂಸದ ನಳಿನ್ ಕುಮಾರ್ ಕಟೀಲ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮುಂದಿನ ಚುನಾವಣೆಯಲ್ಲಿ ಸೋಲಿನ ಭೀತಿಯಿಂದ ಕಾಂಗ್ರೆಸ್ ಮಂಗಳೂರು ಚಲೋಗೆ ಅನುಮತಿ ನಿರಾಕರಿಸಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಹೋರಾಟ ನಡೆಸುವುದು ನಮ್ಮ ಹಕ್ಕು. ಕಾಂಗ್ರೆಸ್ ಸರ್ಕಾರ ಪ್ರತಿಭಟನೆಗೆ ಅನುಮತಿ ನಿರಾಕರಿಸುವ ಮೂಲಕ ಆ ಹಕ್ಕು ಮೊಟಕುಗೊಳಿಸುವ ಪ್ರಯತ್ನ ನಡೆಸಿದೆ. ಮಂಗಳೂರು ಚಲೋ ನಡೆಸಿಯೇ ಸಿದ್ದ. ನಿಯೋಜಿತ ಕಾರ್ಯಕ್ರಮಗಳು ನಡೆಯಲಿವೆ. 20 ಸಾವಿರಕ್ಕೂ ಅಧಿಕ ಬೈಕ್‌ಗಳು ಭಾಗವಹಿಸಲಿವೆ. ಸರ್ಕಾರಕ್ಕೆ ಸಾಮರ್ಥ್ಯವಿದ್ದರೆ ತಡೆಯಲಿ ಎಂದು ನಳಿನ್ ಸವಾಲೆಸೆದಿದ್ದಾರೆ.

LEAVE A REPLY