ಶಕ್ತಿ ಶಾಲಿ ಕ್ಷಿಪಣಿ ಸಮರಾಭ್ಯಾಸ: ಉತ್ತರ ಕೊರಿಯಾಗೆ ದಕ್ಷಿಣ ಕೊರಿಯಾ ತಿರುಗೇಟು !

ಸಿಯೋಲ್: ಜಾಗತಿಕ ಪ್ರಬಲ ವಿರೋಧಗಳ ನಡುವೆಯೂ ಜಲಜನಕ ಬಾಂಬ್ ಪರೀಕ್ಷೆ ನಡೆಸಿ ತನ್ನ ಮೊಂಡುತನ ಮುಂದುವರಿಸಿರುವ ಉತ್ತರ ಕೊರಿಯಾಗೆ ಇಂದು ಕ್ಷಿಪಣಿಗಳ ಸಮರಾಭ್ಯಾಸ ನಡೆಸುವ ಮೂಲಕ ದಕ್ಷಿಣ ಕೊರಿಯಾ ತಿರುಗೇಟು ನೀಡಿದೆ.
ಇಂದು ನಡೆಸಿರುವ ಕ್ಷಿಪಣಿ ಸಮರಾಭ್ಯಾಸದಲ್ಲಿ ಉತ್ತರ ಕೊರಿಯಾದ ಪರಮಾಣು ತಾಣಗಳನ್ನು ಗುರಿಯಾಗಿಸಿಕೊಳ್ಳಲಾಗಿತ್ತು. ಅಲ್ಲದೆ, ತನ್ನ ಶಕ್ತಿ ಶಾಲಿ ಐಯನ್ ಯೂ ಬ್ಯಾಲೇಸ್ಟಿಕ್ ಕ್ಷಿಪಣಿಗಳು ಮತ್ತು ಎಫ್. 15ಕೆ ಯುದ್ಧ ವಿಮಾನಗಳನ್ನು ಬಳಸಿಕೊಂಡಿತ್ತು ಎಂದು ಸುದ್ಧಿ ಸಂಸ್ಥೆಗಳು ವರದಿ ಮಾಡಿದೆ.
ಅತ್ತ ಉತ್ತರ ಕೊರಿಯಾ ಪರಮಾಣು ಪರೀಕ್ಷೆ, ಖಂಡಾಂತರ ಕ್ಷಿಪಣಿ ಉಡಾವಣೆ ಮುಂದುವರಿಸುತ್ತಿದ್ದರೆ, ಇತ್ತ ದಕ್ಷಿಣ ಕೊರಿಯಾ ಮಿತ್ರ ರಾಷ್ಟ್ರ ಅಮೆರಿಕಾದೊಂದಿಗೆ ಜಂಟಿ ಸಮಾರಾಭ್ಯಾಸ ನಡೆಸಿತ್ತು. ಇದರಿಂದ ಕೆರಳಿದ ಉತ್ತರ ಕೊರಿಯಾ, ಪರಮಾಣು ಅಸ್ತ್ರಗಳ ಪ್ರಯೋಗ ನಡೆಸಿತ್ತು. ಇಷ್ಟು ಸಾಲದು ಎಂಬಂತೆ ಇತ್ತೀಚೆಗಷ್ಟೆ ಅಮೆರಿಕಾದ ಸೇನಾ ನೆಲೆ ಇರುವ ಗೌಮ್ ಅನ್ನು ಗುರಿಯಾಗಿಸಿಕೊಂಡು ಕ್ಷಿಪಣಿ ಹಾರಿಸಿತ್ತು. ನಿನ್ನೆಯಷ್ಟೇ ಖಂಡಾಂತರ ಕ್ಷಿಪಣಿಗಳಲ್ಲಿ ಹೈಡ್ರೋಜನ್ ಬಾಂಬ್ ಇಟ್ಟು ಉಡಾವಣೆ ಮಾಡುವ ಪರೀಕ್ಷೆಯನ್ನೂ ನಡೆಸಿತ್ತು. ಅಂದಹಾಗೆ ಕೊರಿಯಾ ಪರ್ಯಾಯ ದ್ವೀಪದಲ್ಲಿರುವ ಉತ್ತರ ಮತ್ತು ದಕ್ಷಿಣ ಕೊರಿಯಾಗಳು ಮೊದಲಿನಿಂದಲೂ ಶಸ್ತ್ರಾಸ್ತ್ರ ಪೈಪೋಟಿಯಲ್ಲಿ ತೊಡಗಿಕೊಂಡಿವೆ.

LEAVE A REPLY