ಅಮೆರಿಕದ ಇತಿಹಾಸದಲ್ಲೇ ಅತಿ ದೊಡ್ಡ ಪ್ರಾಕೃತಿಕ ವಿಕೋಪ : ಏರುತ್ತಲೇ ಇದೆ ಸಾವಿನ ಸಂಖ್ಯೆ

ಹೋಸ್ಟನ್: ಹಾರ್ವೆ ಚಂಡಮಾರುತದ ಸಂತ್ರಸ್ತರಿಗೆ ನೆರವಾಗಲು ಹಾಗೂ ಪರಿಹಾರ ಕಾರ್ಯಾಚರಣೆಗೆ ಕೈಜೋಡಿಸಲು ಅಮೆರಿಕದ ಕಾರ್ಪೊರೇಟ್ ದೈತ್ಯರು ಮುಂದಾಗಿದ್ದು, 170 ದಶ ಲಕ್ಷ ಡಾಲರ್ ನೆರವನ್ನು ಘೋಷಿಸಿದ್ದಾರೆ.
ಅಮೆರಿಕದ ಇತಿಹಾಸದಲ್ಲೇ ಅತಿ ದೊಡ್ಡ ಪ್ರಾಕೃತಿಕ ವಿಕೋಪ ಎಂದು ಬಣ್ಣಿಸಲಾದ ಹಾರ್ವೆ ಚಂಡಮಾರುತದಿಂದ ಟೆಕ್ಸಾಸ್ ನಗರ ಭಾಗಶಃ ಮುಳುಗಿದೆ. ಈ ಚಂಡಮಾರುತದಿಂದ ಇದುವರೆಗೂ ಕನಿಷ್ಠ 50 ಮಂದಿ ಸಾವಿಗೀಡಾಗಿದ್ದಾರೆ. 1,85,000 ಮನೆಗಳಿಗೆ ಹಾನಿಯಾಗಿದೆ. 9,000 ಮನೆಗಳು ನೆಲಸಮವಾಗಿವೆ. ಜಲಾಶಯ ಮತ್ತು ನದಿಗಳು ಅಪಾಯ ಮಟ್ಟ ಮೀರಿ ಹರಿಯುತ್ತಿದ್ದು, 42,000 ಮಂದಿ ನಿರಾಶ್ರಿತರಾಗಿದ್ದಾರೆ.
ಬದುಕುಳಿದವರಿಗಾಗಿ ಶೋಧ
ಚಂಡಮಾರುತ ಮತ್ತು ಪ್ರವಾಹದಿಂದಾಗಿ ಕನಿಷ್ಠ ೫೦ ಮಂದಿ ಸಾವಿಗೀಡಾಗಿದ್ದು, ಬದುಕುಳಿದವಾರಿಗಾಗಿ ರಕ್ಷಣಾಕಾರ್ಯ ನಡೆಸಲಾಗುತ್ತಿದೆ. ಇನ್ನು ಮನೆ ಛಾವಣಿಗಳ ಮೇಲಿರುವವರನ್ನು ಹೆಲಿಕಾಪ್ಟರ್ ಮೂಲಕ ಸುರಕ್ಷಿತ ಸ್ಥಳಕ್ಕೆ ರವಾನಿಸಲಾಗುತ್ತಿದೆ.
೫೨ ಕಂಪೆನಿಗಳಿಂದ ದೇಣಿಗೆ
52 ಕ್ಕೂ ಹೆಚ್ಚು ಕಂಪೆಗಳು 1 ದಶಲಕ್ಷ ಡಾಲರ್ ಅಥವಾ ಅದಕ್ಕೂ ಹೆಚ್ಚಿನ ಪ್ರಮಾಣದ ಹಣಕಾಸಿನ ನರವು ನೀಡುವುದಾಗಿ ಘೋಷಿಸಿವೆ. ಟೆಕ್ ಕೋಟ್ಯಧಿಪತಿ ಮತ್ತು ಹೋಸ್ಟನ್‌ನ ಮಿಕೆಲ್ ಡೆಲ್ 36 ದಶ ಲಕ್ಷ ಮಿಲಿಯನ್ ಡಾಲರ್‌ಗೂ ಹೆಚ್ಚು ನೆರವು ನೀಡುವುದಾಗಿ ಘೋಷಿಸಿದ್ದಾರೆ.
ಟೆಕ್ಸಾಸ್ ರಾಜ್ಯಪಾಲ ಜಾರ್ಜ್ ಅಬ್ಬೊಟ್ ಜತೆಗೂಡಿ ಡೆಲ್‌ನ ಸಂಸ್ಥಾಪಕ ಹಾಗೂ ಸಿಇಒ ಮತ್ತು ಅವರ ಪತ್ನಿ ಸುಸಾನ್ ಕೂಡ ಟೆಕ್ಸಾಸ್ ಪುನರ್‌ನಿರ್ಮಾಣ ನಿಧಿಗೆ ಚಾಲನೆ ನಿಡಿದ್ದಾರೆ. ನಿಧಿಗೆ 100 ದಶ ಲಕ್ಷ ಡಾಲರ್‌ಗೂ ಹೆಚ್ಚ ದೇಣಿಗೆ ಹರಿದುಬರುವ ಸಾಧ್ಯತೆ ಇದೆ. ಇದನ್ನು ಟೆಕ್ಸಾಸ್ ಪುನರ್ ನಿರ್ಮಾಣ ಕಾರ್ಯಕ್ಕೆ ಬಳಸಲಾಗುತ್ತದೆ ಎಂದು ಡೆಲ್‌ನ ಮಿಚೀಲ್ ಮತ್ತು ಸುಸಾನ್ ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ.
ಹೀಗೆ ಅಮೆರಿಕದ ವಿವಿಧ ಕಂಪನಿಗಳು ಪರಿಹಾರಕ್ಕಾಗಿ ದೇಣಿಗೆಯನ್ನು ಪ್ರಕಟಿಸಿದ್ದು, ಅದರಂತೆ ವಾಲ್‌ಮಾರ್ಟ್ 20 ದಶಲಕ್ಷ ಡಾಲರ್, ವೆರಿಜಾನ್ 10 ದಶಲಕ್ಷ ಡಾಲರ್ ಪ್ರಕಟಿಸಿವೆ ಎಂದು ಸಿಎನ್‌ಎನ್ ವರದಿ ಮಾಡಿದೆ.
ಅಂತೆಯೇ ಫೆಡ್‌ಎಕ್ಸ್ ಮತ್ತು ಯುಪಿಎಸ್‌ನಿಂದ ತಲಾ 10 ಲಕ್ಷ ಡಾಲರ್, ಸ್ಯಾಮಸಂಗ್ 10 ಲಕ್ಷ ಡಾಲರ್, ಜೆಪಿ ಮಾರ್ಗನ್ 10 ಲಕ್ಷ ಡಾಲರ್ ದೇಣಿಗೆ ನೀಡುವುದಾಗಿ ತಿಳಿಸಿವೆ.

LEAVE A REPLY