60 ಲಕ್ಷ ಬುಕ್: ಗ್ರಾಹಕರಿಗೆ ನವರಾತ್ರಿಗೆ ಜಿಯೋ ಫೋನ್ ಪೂರೈಕೆ

ಮುಂಬೈ: ರಿಲಯನ್ಸ್ ರಿಟೈಲ್ ಅದರ ಹೊಸ 4ಜಿ ಫೀಚರ್ ಫೋನ್‌ಗೆ 60 ಲಕ್ಷ ಮುಂಗಡ ಬುಕ್ಕಿಂಗ್ ಸ್ವೀಕರಿಸಿದೆ.
ರಿಲಯನ್ಸ್ ಜಿಯೋ 60 ಲಕ್ಷ 4ಜಿ ಫೀಚರ್ ಫೋನ್‌ಗಳನ್ನು ಮೊದಲು ಬಂದವರಿಗೆ ಮೊದಲು ಎಂಬ ಕ್ರಮದಲ್ಲಿ ಕ್ರಮವಾಗಿ ಗ್ರಾಹಕರಿಗೆ ಪೂರೈಕೆ ಮಾಡಲಿದೆ. ರಿಲಯನ್ಸ್ ೪ಜಿ ಫೀಚರ್ ಫೋನ್‌ಗಳ ಪೂರೈಕೆಯನ್ನು ನವರಾತ್ರಿಗೆ ಮಾಡಲಿದೆ. ಇದು ದೇಶದ ಉಳಿದ ಪ್ರಮುಖ ಟೆಲಿಕಾಂ ಕಂಪೆನಿಗಳ ಮಾರುಕಟ್ಟೆ ಷೇರನ್ನು ಮತ್ತೂ ಕಡಿತ ಮಾಡುವುದನ್ನು ನಿರೀಕ್ಷಿಸಲಾಗಿದೆ.
ಮುಂಗಡ ಬುಕ್ಕಿಂಗ್ ಆ.24ರಂದು ಸಂಜೆ ತೆರೆಯಲಾಗಿ ಆ.26ರಂದು ಪ್ರಕ್ರಿಯೆ ನಿಲ್ಲಿಸಲಾಯಿತು. ಕೇವಲ ಜಿಯೋ ಫೋನ್ ಮುಂಗಡ ಕಾಯ್ದಿರಿಸದವರಲ್ಲದೇ 1 ಕೋಟಿ ಜನರು ರಿಲಯನ್ಸ್‌ನಲ್ಲಿ ನೋಂದಣಿ ಮಾಡಿಕೊಂಡಿದ್ದಾರೆ. ಇದು ಜಿಯೋ ಫೋನ್ ಖರೀದಿ ಮಾಡುವ ಅವರ ಆಸಕ್ತಿಯನ್ನು ತೋರಿಸುತ್ತದೆ ಎಂದು ಸಂಸ್ಥೆ ಅಕಾರಿಗಳು ಹೇಳಿದ್ದಾರೆ. ಜಿಯೋ ಫೋನ್ ಸೆ.21ರಂದು ಗ್ರಾಹಕರಿಗೆ ಪೂರೈಕೆಯಾಗಲಿದೆ ಎಂದು ಸುದ್ದಿ ಸಂಸ್ಥೆಯೊಂದು ಹೇಳಿದೆ. ಅಕೃತ ಮಾಹಿತಿ ಇನ್ನೂ ಹೊರಬಿದ್ದಿಲ್ಲ.

LEAVE A REPLY