ಇಂದು ಚೀನಾಗೆ ಭೇಟಿ ನೀಡಲಿರುವ ಮೋದಿ:  ದ್ವಿಪಕ್ಷೀಯ ಬೆಳವಣಿಗೆ ಬಗ್ಗೆ ಗಮನ

ಹೊಸದಿಲ್ಲಿ : ಪ್ರಧಾನಿ ಮೋದಿ ಭಾನುವರದಿಂದ ತಮ್ಮ ವಿದೇಶ ಪ್ರವಾಸವನ್ನು ಕೈಗೊಳ್ಳಲಿದ್ದಾರೆ. ಈ ಸಲದ ಪ್ರವಾಸದಲ್ಲಿ ಅವರು ಚೀನಾ ಹಾಗೂ ಮಯನ್ಮಾರ್‌ಗೆ ಭೇಟಿ ನೀಡಲಿದ್ದು, ಫೆಸ್ಬುಕ್‌ನಲ್ಲಿ ತಿಳಿಸಿದ್ದಾರೆ.
ಡೋಕ್ಲಾಂ ಬಿಕ್ಕಟ್ಟಿನಿಂದಾಗಿ ತೀವ್ರ ಕುತೂಹಲ ಕೆರಳಿಸಿದ್ದ ಮೋದಿಯವರ ಚೀನಾ ಪ್ರವಾಸ, ಇದೀಗ ಇನ್ನಷ್ಟು ಕುತೂಹಲ ಕೆರಳಿಸಿದೆ. ಮೋದಿ ಭೇಟಿಗೂ ಒಂದು ವಾರ ಮುಂಚಿತವಾಗಿಯೇ ಎರಡೂ ದೇಶಗಳು ಬಿಕ್ಕಟ್ಟನ್ನು ಶಮನಮಾಡಿಕೊಂಡಿವೆ. ಈ ನಿಟ್ಟಿನಲ್ಲಿ ಮೋದಿ ಚೀನಾ ಪ್ರವಾಸ ಇನ್ನಷ್ಟು ಕಾತುರತೆಯನ್ನು ಹುಟ್ಟುಹಾಕಿದೆ. ಸೆ.೩ ರಿಂದ ಸೆ.೫ರವರೆಗೆ ೯ನೇ ಬ್ರಿಕ್ಸ್ ಸಮಾವೇಶ ಚೀನಾದಲ್ಲಿ ನಡೆಯಲಿದ್ದು, ಇದರಲ್ಲಿ ಭಾಗವಹಿಸಲು ಮೋದಿ ಚೀನಾಗೆ ತೆರಳುತ್ತಿದ್ದಾರೆ. ಬ್ರಿಕ್ಸ್ ರಾಷ್ಟ್ರಗಳು ಮಾತ್ರವಲ್ಲದೆ ಚೀನಾದ ಖಾಸಗಿ ಆಹ್ವಾನದೊಂದಿಗೆ ಇನ್ನು ಕೆಲ ರಾಷ್ಟ್ರಗಳು ಈ ಸಮಾವೇಶದಲ್ಲಿ ಪಾಲ್ಗೊಳ್ಳಲಿವೆ.
ಐದು ರಾಷ್ಟ್ರಗಳ ಉದ್ಯಮದ ನಾಯಕರು ಪ್ರತಿನಿಸುವ ಬ್ರಿಕ್ಸ್ ವ್ಯವಹಾರ ಮಂಡಳಿಯೊಂದಿಗೆ ಮೋದಿ ಚರ್ಚೆ ನಡೆಸಲಿದ್ದಾರೆ. ಇನ್ನು ಪಾಕ್ ಭಯೋತ್ಪಾದನೆ ಮಾತನಾಡದಂತೆ ಈಗಾಗಲೇ ಚೀನಾ ಮನವಿ ಮಾಡಿಕೊಂಡಿದೆ. ಹೀಗಾಗಿ ಈಸಲದ ಭೇಟಿಯಲ್ಲಿ ಮೋದಿ ಯಾವ ವಿಷಯದ ಬಗ್ಗೆ ಮಾತನಾಡುತ್ತಾರೆ ಎನ್ನುವುದು ಕೂಡ ಕುತೂಹಲದ ವಿಷಯವಾಗಿದೆ.
ಬ್ರಿಕ್ಸ್ ಸಮಾವೇಶನ್ನು ಮುಗಿಸಿಕೊಂಡು ಅವರು, ಎರಡು ದಿನಗಳ ಕಾಲ ಮಯನ್ಮಾರ್‌ಗೆ ಭೇಟಿ ನೀಡಲಿದ್ದಾರೆ. ಮೋದಿಯವರಿಗೆ ಇದು ದ್ವೀಪಕ್ಷಿಯ ಮಾತುಕತೆಗಾಗಿ ನೀಡುತ್ತಿರುವ ಮೊದಲ ಭೇಟಿಯಾಗಿದೆ. ಆದರೆ, ೨೦೧೪ರಲ್ಲಿ ಎಎಸ್‌ಇಎಎನ್-ಇಂಡಿಯಾ ಸಮಿತ್‌ನಲ್ಲಿ ಭಾಗವಹಿಸುವುದಕ್ಕಾಗಿ ಇಲ್ಲಿಗೆ ಹೋಗಿದ್ದರು. ಈ ಸಲದ ಭೇಟಿಯಲ್ಲಿ ದ್ವಿಪಕ್ಷೀಯ ಬೆಳವಣಿಗೆಗಳ ಬಗ್ಗೆ ಹೆಚ್ಚಿನ ಗಮನಕೊಡುವುದಾಗಿ ಮೋದಿ ದೇಶದ ಜನತೆಗೆ ತಿಳಿಸಿದ್ದಾರೆ.

LEAVE A REPLY