ನದಿಗಳ ಉಳಿವಿಗಾಗಿ ಕನ್ಯಾಕುಮಾರಿಯಿಂದ ಹಿಮಾಲಯ #Rally for Rivers: ಇಂದು ಚಾಲನೆ 

ಕೊಯಮತ್ತೂರು : ನದಿಗಳ ಉಳಿವಿಗಾಗಿ ಸದ್ಗುರು ಜಗ್ಗಿ ವಾಸುದೇವ್ ಹಮ್ಮಿಕೊಂಡಿರುವ ‘ರ್‍ಯಾಲಿ ಫಾರ್ ರಿವರ್’ಗೆ ಭಾನುವಾರ ಭರ್ಜರಿ ಚಾಲನೆ ಸಿಗಲಿದೆ. ಈ ಒಂದು ಬೃಹತ್ ರ್‍ಯಾಲಿಗೆ ಪಂಜಾಬ್ ರಾಜ್ಯಪಾಲರಾದ ವಿ.ಪಿ. ಸಿಂಗ್ ಬಂಡೊರೆ, ಕೇಂದ್ರ ಸಚಿವ ಹರ್ಷವರ್ಧನ್ ಹಾಗೂ ಮಾಜಿ ಕ್ರಿಕೆಟಿಗ ವಿರೇಂದ್ರ ಸೆಹ್ವಾಗ್ ಚಾಲನೆ ನೀಡಲಿದ್ದಾರೆ.
ತಮಿಳು ನಾಡಿನ ಸಚಿವ ಥಿರು ಎಸ್.ಪಿ. ವೇಲುಮಣಿ, ಭಾರತದ ಮಹಿಳಾ ಕ್ರಿಕೆಟ್ ತಂಡದ ನಾಯಕಿ ಮಿಥಾಲಿ ರಾಜ್, ಫಾರ್ಮುಲಾ ಒನ್ ರೇಸ್ ಆಟಗಾರ ನಾರಾಯಣ್ ಕಾರ್ತಿಕೇಯನ್ ಸೇರಿದಂತೆ ಹಲವು ಗಣ್ಯರು ಈ ಒಂದು ಕಾರ್ಯಕ್ರಮದಲ್ಲಿ ಉಪಸ್ಥಿತರಿರಲಿದ್ದಾರೆ.
ರ್‍ಯಾಲಿಯು ಸೆ.3 ರಿಂದ ಆ. 2ರವರೆಗೆ ನಡೆಯಲಿದ್ದು, ಕನ್ಯಾಕುಮಾರಿಯಿಂದ ಹಿಮಾಲಯದವರೆಗೂ ಜರುಗುವ ಈ ರ್‍ಯಾಲಿಯು 16 ರಾಜ್ಯಗಳಲ್ಲಿನ ಪ್ರಮುಖ ನಗರಗಳಲ್ಲಿ 23 ಕಾರ್ಯಕ್ರಮಗಳೊಂದಿಗೆ 7,000 ಕಿ.ಮೀ. ಕ್ರಮಿಸಲಿದೆ.

LEAVE A REPLY