ಯುವಮೋರ್ಚ ಕಾರ್ಯಕರ್ತರಿಗೆ ಅವಕಾಶ ನೀಡದಂತೆ ಸುಳ್ಯ ಪೊಲೀಸರಿಂದ ನೋಟೀಸ್!

ಸುಳ್ಯ: ಮಂಗಳೂರಿನಲ್ಲಿ ನಡೆಯಲಿರುವ ಮಂಗಳೂರು ಚಲೋ ರ್‍ಯಾಲಿಗೆ ಮೈಸೂರು, ಕೊಡಗಿನಿಂದ ಆಗಮಿಸುವ ಯುವ ಮೋರ್ಚಾ ಕಾರ್ಯಕರ್ತರಿಗೆ ಯಾವುದೇ ಕಾರಣಕ್ಕೂ ಸುಳ್ಯದ ಕೇರ್ಪಳದ ದುರ್ಗಾಪರಮೇಶ್ವರಿ ಕಲಾಮಂದಿರದಲ್ಲಿ ತಂಗಲು ಅವಕಾಶ ನೀಡದಂತೆ ಮಂದಿರದ ಮುಖ್ಯಸ್ಥರಿಗೆ ಸುಳ್ಯ ಪೊಲೀಸ್ ಉಪನಿರೀಕ್ಷಕರು ನೋಟೀಸ್ ಜಾರಿ ಮಾಡಿದ್ದಾರೆ.
ಕಾರ್ಯಕರ್ತರಿಗೆ ಮಂದಿರದಲ್ಲಿ ತಂಗಲು ಅವಕಾಶ ನೀಡಿದ್ದಲ್ಲಿ ಕಾನೂನು ಸುವ್ಯವಸ್ಥೆಗೆ ದಕ್ಕೆ ಉಂಟಾಗುವ ಸಾಧ್ಯತೆ ಇರುವುದರಿಂದ ಯುವ ಮೋರ್ಚಾ ಕಾರ್ಯಕರ್ತರಿಗೆ ತಂಗಲು ಅನುಮತಿ ನೀಡಬಾರದು ಎಂದು ಉಪನಿರೀಕ್ಷಕರು ನೋಟೀಸ್‌ನಲ್ಲಿ ಸೂಚಿಸಿದ್ದಾರೆ
ಸೆ.೭ರಂದು ಬಿಜೆಪಿ ಪಕ್ಷದ ವತಿಯಿಂದ ಯುವಮೋರ್ಚಾ ರ್‍ಯಾಲಿಯು ಮಂಗಳೂರಿನಲ್ಲಿ ನಡೆಯಲಿದ್ದು, ಮೈಸೂರು, ಮಡಿಕೇರಿಯಿಂದ ಬೈಕ್ ರ್‍ಯಾಲಿಯಲ್ಲಿ ಭಾಗವಹಿಸುವವರಿಗೆ, ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ದೃಷ್ಟಿಯಿಂದ  ಸುಳ್ಯದ ದುರ್ಗಾ ಪರಮೇಶ್ವರಿ ಕಲಾಮಂದಿರದ ಹಾಲ್‌ನಲ್ಲಿ ತಂಗುವ ಅನುಮತಿಯನ್ನು ನೀಡಬಾರದಾಗಿ ಸುಳ್ಯ ಪೊಲೀಸ್ ಉಪನಿರೀಕ್ಷಕರು ನೋಟೀಸ್ ನೀಡಿದ್ದಾರೆ.

LEAVE A REPLY