‘ಘೋರ’ಖ್‌ಪುರ ಶಿಶುಗಳ ಸರಣಿ ಸಾವು : ಡಾ. ಖಲೀಫ್ ಖಾನ್ ಬಂಧನ

ಲಕ್ನೋ: ಗೋರಖ್‌ಪುರ ಆಸ್ಪತ್ರೆಯಲ್ಲಿ ಸಂಭವಿಸಿದ ಶಿಶುಗಳ ಸರಣಿ ಸಾವು ಪ್ರಕರಣದ ಮೂರನೇ ಆರೋಪಿ ಡಾ. ಖಲೀಫ್ ಖಾನ್‌ನನ್ನು ಬಂಧಿಸಲಾಗಿದೆ ಎಂದು ವಿಶೇಷ ಕಾರ್ಯಪಡೆ (ಎಸ್‌ಟಿಎಫ್) ಮಹಾ ನಿರ್ದೇಶಕ ಅಮಿತಾಭ್ ಯಶ್ ಹೇಳಿದ್ದಾರೆ.
ಸರ್ಕಾರಿ ಒಡೆತನದ ಬಾಬಾ ರಾಘವ್ ದಾಸ್ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ 100 ಹಾಸಿಗೆಗಳ ಸಾಮರ್ಥ್ಯದ ವಾರ್ಡ್‌ನಲ್ಲಿ ನೋಡಲ್ ಆಫೀಸರ್ ಆಗಿದ್ದ ಡಾ. ಖಲೀಫ್ ಖಾನ್‌ನನ್ನು ಎರಡು ದಿನಗಳ ಅವಧಿಯಲ್ಲಿ 30 ಮಕ್ಕಳು ಮೃತಪಟ್ಟ ಬಳಿಕ ಕರ್ತವ್ಯಲೋಪಕ್ಕಾಗಿ ಸೇವೆಯಿಂದ ವಜಾಗೊಳಿಸಲಾಗಿತ್ತು.

LEAVE A REPLY