ರಾಜಸ್ತಾನದ ಆಸ್ಪತ್ರೆಯಲ್ಲೂ ಮರಣ ಮೃದಂಗ : 49 ನವಜಾತ ಶಿಶುಗಳ ಸಾವು

file photo

ಫರೂಕಾಬಾದ್: ಇಲ್ಲಿನ ಸರ್ಕಾರಿ ಆಸ್ಪತ್ರೆಯಲ್ಲಿಯೂ ಕಳೆದ ಒಂದು ತಿಂಗಳಿನಲ್ಲಿ 49 ನವಜಾತ ಶಿಶುಗಳು ಮೃತಪಟ್ಟಿರುವುದು ತಡವಾಗಿ ಬೆಳಕಿಗೆ ಬಂದಿದ್ದು, ಮಕ್ಕಳ ಸಾವಿನ ಬಗ್ಗೆ ಜಿಲ್ಲಾಧಿಕಾರಿ ರವೀಂದ್ರ ಕುಮಾರ್ ತನಿಖೆಗೆ ಆದೇಶ ನೀಡಿದ್ದಾರೆ.
ಈ ಕಂದಮ್ಮಗಳ ಸಾವಿಗೆ ಮುಖ್ಯ ಕಾರಣ ಶಿಶುಗಳು ಜನಿಸುವಾಗ ತೀರಾ ಕಡಿಮೆ ತೂಕ ಹೊಂದಿದ್ದು, ಗಂಭೀರ ಸ್ಥಿತಿಯಲ್ಲಿದ್ದವು. ಅಲ್ಲದೇ ತುಂಬಾ ತಡವಾಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು ಎಂದು ಹೇಳಲಾಗಿದೆಯಾದರೂ, ಆಥಮಕಕಾರಿ ಬೆಳವಣಿಗೆಯಾದ್ದರಿಂದ ಸೂಕ್ತ ತನಿಖೆ ನಡೆಸಲು ನಿರ್ದೇಶಿಸಲಾಗಿದೆ. ಇಲ್ಲಿ 30 ಮಕ್ಕಳು ತೀವ್ರ ನಿಗಾ ಘಟಕದಲ್ಲಿ ಮೃತಪಟ್ಟಿವೆ. ಇತರ 19 ಶಿಶುಗಳು ಹೆರಿಗೆ ಸಂದರ್ಭದಲ್ಲಿ ಅಥವಾ ಹೆರಿಗೆಯಾದ ನಂತರ ಕೆಲವೇ ಗಂಟೆಗಳಲ್ಲಿ ಅಸುನೀಗಿವೆ ಎಂದು ಮೂಲಗಳು ಹೇಳಿವೆ.

LEAVE A REPLY