ತಿರುಪತಿ ಗೋವಿಂದನ ದರ್ಶನ ಪಡೆದ ರಾಷ್ಟ್ರಪತಿ ಕೋವಿಂದ್

ತಿರುಪತಿ: ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಶನಿವಾರ ತಿರುಪತಿ ಶ್ರೀವೆಂಕಟೇಶ್ವರನ ಸನ್ನಿಧಿಗೆ ಭೇಟಿ ನೀಡಿ ವಿಶೇಷ ಪೂಜೆ ಅರ್ಪಿಸಿದರು.
ರಾಷ್ಟ್ರಪತಿ ಅವರ ಜೊತೆ ಪತ್ನಿ ಸವಿತಾ, ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಮತ್ತು ರಾಜ್ಯಪಾಲ ಇ.ಎಸ್.ಎಲ್. ನರಸಿಂಹನ್ ಹಾಗೂ ಕುಟುಂಬದ ಇತರ ಸದಸ್ಯರು ಉಪಸ್ಥಿತರಿದ್ದರು.
ರಷ್ಟ್ರಪತಿಯವರ ಭೇಟಿಯ ಹಿನ್ನೆಲೆಯಲ್ಲಿ ತಿರುಪತಿ ಹಾಗೂ ಸುತ್ತಮುತ್ತಲ ಪ್ರದೇಶದಲ್ಲಿ ವ್ಯಾಪಕ ಬಂದೋಬಸ್ತ್ ಕೈಗೊಳ್ಳಲಾಗಿತ್ತು.
ಶ್ರೀ ವೆಂಕಟೇಶ್ವರನ ಭಕ್ತರಾಗಿರುವ ಕೋವಿಂದ್, ರಾಷ್ಟ್ರಪತಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಬಳಿಕ ತಿರುಪತಿಗೆ ಮೊದಲಬಾರಿಗೆ ಭೇಟಿ ನೀಡಿದ್ದಾರೆ.

LEAVE A REPLY