ಉಡುಪಿ ಮರಳು ಸಮಸ್ಯೆಗೆ ಮುಕ್ತಿ: 142 ಮಂದಿಗೆ ಮರಳುಗಾರಿಕೆ ಪರವಾನಗಿ

ಉಡುಪಿ: ಜಿಲ್ಲೆಯಲ್ಲಿ ಉದ್ಭವಿಸಿದ್ದ ಮರಳುಗಾರಿಕೆ ಸಮಸ್ಯೆಗೆ ಮುಕ್ತಿ ಸಿಕ್ಕಿದ್ದು, ಶುಕ್ರವಾರದಿಂದ ಜಿಲ್ಲೆಯ ನದಿ-ಹೊಳೆಗಳಲ್ಲಿ ಅಧಿಕೃತ ಮರಳುಗಾರಿಕೆ ಪ್ರಾರಂಭಗೊಂಡಿದೆ.
ಕಳೆದ ಒಂದುವರೆ ವರ್ಷದಿಂದ ಜನಸಾಮಾನ್ಯರು ಮನೆ ಕಟ್ಟಲು, ಆವರಣಗೋಡೆ, ಶೌಚಾಲಯ ಇಂತಹ ಸಣ್ಣ ಪುಟ್ಟ ನಿರ್ಮಾಣ ಕಾರ್ಯಗಳಿಗೆ ದುಬಾರಿ ಬೆಲೆ ಕೊಟ್ಟು ಮರಳು ಖರೀದಿಸಬೇಕಾಗಿದ್ದ ಪರಿಸ್ಥಿತಿ ಒಂದೆಡೆಯಾಗಿದ್ದರೆ, ಇನ್ನೊಂದೆಡೆ ಇದ್ದ ಮರಳನ್ನು ಭಾರೀ ಕಟ್ಟಡ ನಿರ್ಮಾಣಕಾರರು ಪಡೆಯುತ್ತಿರುವುದರಿಂದ ಬಡವರಿಗೆ ಮರಳು ಕೊರತೆಯಾಗಿತ್ತು. ಇದೀಗ ಮರಳುಗಾರಿಕೆ ಪುನರಾರಂಭಗೊಂಡಿದ್ದರಿಂದ ಜನಸಾಮಾನ್ಯರಿಗೆ ಕಡಿಮೆ ದರದಲ್ಲಿ ಮರಳು ಲಭಿಸುವ ಭರವಸೆ ಮೂಡಿದೆ.
ಕೆಲವು ಗ್ರಾಮಗಳ ಗ್ರಾಮಸ್ಥರು ಮರಳುಗಾರಿಕೆಯಿಂದ ಸಮಸ್ಯೆಯಾಗಿದೆ ಎಂದು ರಾಷ್ಟ್ರೀಯ ಹಸಿರು ನ್ಯಾಯಾಧೀ ಕರಣದಲ್ಲಿ ದಾವೆ ಹೂಡಿದ್ದರು. ಇದರಿಂದ ಜಿಯ ಕರಾವಳಿ ನಿಯಂತ್ರಣ ವಲಯ (ಸಿಆರ್‌ಝಡ್) ವ್ಯಾಪ್ತಿಯ ಮರಳುಗಾರಿಕೆಗೆ ನ್ಯಾಯಪೀಠ ತಡೆಯಾe ನೀಡಿತ್ತು. ಕೆಲವು ತಾಂತ್ರಿಕ ಕಾರಣಗಳಿಂದ ಅದನ್ನು ತೆರವುಗೊಳಿಸುವ ಜಿಡಳಿತದ ಪ್ರಯತ್ನ ಪದೇಪದೇ ವಿಫಲವಾಗಿತ್ತು.
142 ಮಂದಿಗೆ ಪರವಾನಗಿ 
ಇದೀಗ ಎರಡು ವಾರಗಳ ಹಿಂದೆ ನ್ಯಾಯಪೀಠದ ವಿಧಿಸಿದ್ದ ತಡೆಯಾe ತೆರವಾಗಿದೆ. ಈ ಹಿಂದೆ ಸಿಆರ್‌ಝಡ್ ವಲಯದ ನದಿ ನೀರಲ್ಲಿ ಸಾಂಪ್ರಾದಾಯಿಕವಾಗಿ ಮುಳುಗಿ ಮರಳು ಎತ್ತುತ್ತಿದ್ದ ೧೬೪ ಮಂದಿಯಲ್ಲಿ ಒಟ್ಟು ೧೪೨ ಮಂದಿಗೆ ಜಿಡಳಿತ ಪರವಾನಗಿ ನೀಡಿದೆ. ಅದರಂತೆ ಶುಕ್ರವಾರದಿಂದ ಉಡುಪಿ ಜಿಯ ಕೆಲವು ಕಡೆಗಳಲ್ಲಿ ಮರಳು ತೆಗೆಯುವ ಪ್ರಕ್ರಿಯೆ ಆರಂಭವಾಗಿದೆ.
ಪರವಾನಗಿ ನೀಡುವಲ್ಲಿ ಷರತ್ತುಗಳ ಮೂಲಕ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿರುವ ಜಿಡಳಿತವನ್ನು ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಅವರು ಶ್ಲಾಘಿಸಿzರೆ. ಜಿಯ ಜನತೆಗೆ ಮತ್ತು ಅಭಿವೃದ್ಧಿ ಕಾರ್ಯಗಳಿಗೆ ಯಾವುದೇ ಕೊರತೆಯಾಗದಂತೆ ಕಡಿಮೆ ಬೆಲೆಯಲ್ಲಿ ಮರಳನ್ನು ಪೂರೈಕೆ ಮಾಡುವುದು ಮತ್ತು ಸಿಆರ್‌ಝಡ್ ವ್ಯಾಪ್ತಿಯಲ್ಲಿ ಪರಿಸರವನ್ನು ರಕ್ಷಿಸುವುದು ತಮ್ಮ ಆದ್ಯತೆಯಾಗಿದೆ ಎಂದು ಸಚಿವರು ಸ್ಪಷ್ಟಪಡಿಸಿzರೆ.

LEAVE A REPLY