ಉತ್ತರ ಕೊರಿಯಾ ಪ್ರವಾಸಕ್ಕೆ ತನ್ನ ಪ್ರಜೆಗಳಿಗೆ ನಿಷೇಧ ಹೇರಿದ ಅಮೆರಿಕ

ವಾಷಿಂಗ್ಟನ್: ಅಮೆರಿಕ ತನ್ನ ನಾಗರಿಕರು ಉತ್ತರ ಕೊರಿಯಾಗೆ ಪ್ರವಾಸ ಕೈಗೊಳ್ಳುವುದಕ್ಕೆ ಸಂಪೂರ್ಣ ನಿಷೇಧ ಹೇರಿದೆ.
ಪಯೋಂಗ್ಯಾಂಗ್ ಉದ್ದಟತನದಿಂದ ಅನೇಕ ಕ್ಷಿಪಣಿಗಳನ್ನು ಉಡಾವಣೆ ಮಾಡಿದ್ದು, ಇದರಿಂದ 2 ದೇಶಗಳ ನಡುವಿನ ದ್ವೇಷಕ್ಕೆ  ಪ್ರಮುಖ ಕಾರಣವಾಗಿದೆ.
ಇದೀಗ ಅಮೆರಿಕವು ಪ್ರಯಾಣ ನಿರ್ಬಂಧಕ್ಕೆ ಪ್ರತಿಕ್ರಿಯಿಸಿದ ಉತ್ತರ ಕೊರಿಯಾ, ಇದರಿಂದ ನಮ್ಮ ಪ್ರವಾಸೋದ್ಯಮ ಕ್ಷೇತ್ರ ಹಾಗೂ ಆರ್ಥಿಕತೆಯ ಮೇಲೆ ಯಾವುದೇ ರೀತಿಯ ಪರಿಣಾವೂ  ಉಂಟಾಗುವುದಿಲ್ಲ. ಅಮೆರಿಕದ ಜನರು ನಮ್ಮ ದೇಶಕ್ಕೆ ಭೇಟಿ ನೀಡದಿದ್ದರೆ ನಾವೇನು ಚಿಂತಿಸುವುದಿಲ್ಲ ಎಂದು  ಹೇಳಿದೆ.
ಈಗಾಗಲೇ ಉತ್ತರ ಕೊರಿಯಾವು ಉಡಾವಣೆ ಮಾಡಿರುವ ಕ್ಷಿಪಣಿಗಳ ವಿಚಾರವಾಗಿಯೂ ಕೂಡ ಉಭಯ ದೇಶಗಳ ನಡುವೆ ತೀವ್ರ ರೀತಿಯಾದ ಸಮಸ್ಯೆ ಉದ್ಭವವಾಗಿದೆ. ವಿಶ್ವಸಂಸ್ಥೆಯ ಸೂಚನೆಯನ್ನು ಉಲ್ಲಂಘಿಸಿ  ಉತ್ತರ ಕೊರಿಯಾವೂ ಅನೇಕ ಬಾರಿ ವಿವಿಧ ರೀತಿಯ ಕ್ಷಿಪಣಿಗಳನ್ನು ಉಡಾವಣೆ ಮಾಡಿದೆ. ಇದೇ ವಾರದಲ್ಲಿ ಕ್ಷಿಪಣಿಯೊಂದನ್ನು ಉಡಾವಣೆ ಮಾಡಿದ್ದು, ಇದೊಂದು ಪ್ರಮುಖವಾದ ಅಮೆರಿಕ ಫೆಸಿಫಿಕ್ ಭೂ ಪ್ರದೇಶದವಾದ  ಗೌಮವರೆಗೂ ಕೂಡ ತೆರಳುವಂತ ಸಾಮರ್ಥ್ಯವನ್ನು ಹೊಂದಿರುವಂತದ್ದಾಗಿದೆ. ಅಲ್ಲದೆ, ಅದಕ್ಕೂ ಮೊದಲು 2 ಬಾರಿ ಖಂಡಾಂತರ ಕ್ಷಿಪಣಿಗಳ ಉಡಾವಣೆಯಲ್ಲಿಯೂ ಕೂಡ ಯಶಸ್ವಿಯನ್ನು ಕಂಡಿದ್ದು, ಇದೀಗ ಮೇಲಿಂದ ಮೇಲೆ ಇದೇ ಕಾರ್ಯವನ್ನು ಮುಂದುವರಿಸಿದ್ದು, ತೀವ್ರ ದ್ವೇಷಕ್ಕೆ ಕಾರಣವಾಗಿದೆ.

LEAVE A REPLY