ಮರಕತ ದುರ್ಗಾಪರಮೇಶ್ವರಿ ದೇವಸ್ಥಾನದಿಂದ ಕಳ್ಳತನ : ಲಕ್ಷಾಂತರ ಮೌಲ್ಯದ ಸೊತ್ತು ಕಳವು

ಪುತ್ತೂರು/ಸುಬ್ರಹ್ಮಣ್ಯ:ಸುಳ್ಯ ತಾಲೂಕಿನ ಅತ್ಯಂತ ಪ್ರಸಿದ್ಧ ದೇವಸ್ಥಾನ ನಾಲ್ಕೂರು ಗ್ರಾಮದ ಮರಕತ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಕಳೆದ ರಾತ್ರಿ ಕಳ್ಳರು ನುಗ್ಗಿದ್ದು ದೇವರ ಉತ್ಸವ ಮೂರ್ತಿ ಸಹಿತ ವಿವಿಧ ವಸ್ತುಗಳನ್ನು ಕಳವಾಗಿದ್ದು  ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದಾರೆ.

ದೇವಸ್ಥಾನದ ಸಿಸಿ ಕ್ಯಾಮಾರ ಹುಡಿ ಮಾಡಿ ನುಗ್ಗಿದ ಕಳ್ಳರು ದೇವರ ವಿಗ್ರಹದಲ್ಲಿದ್ದ ಆಭರಣಗಳು, ಕಾಣಿಕೆ ಹುಂಡಿ, ದೇವರ ಉತ್ಸವ ಮೂರ್ತಿ , ಸೇರಿದಂತೆ ವಿವಿಧ ವಸ್ತುಗಳ ಕಳವಾಗಿದೆ. ಸುಮಾರು 1600 ವರ್ಷಗಳಷ್ಟು ಹಳೆಯದಾದ ಮೂರ್ತಿಯೂ ಈಗ ಕಾಣದಾಗಿದೆ. ಇಂದು ಬೆಳಗ್ಗೆ ದೇವಸ್ಥಾನಕ್ಕೆ ಅರ್ಚಕರು ಹಾಗೂ ಸಿಬಂದಿಗಳು ಆಗಮಿಸಿದಾಗ ಕಳವು ಪ್ರಕರಣ ಬೆಳಕಿಗೆ ಬಂದಿದ್ದು, ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು ಸುಬ್ರಹ್ಮಣ್ಯ ಪೊಲೀಸರು ಸ್ಥಳಕ್ಕೆ ಆಗಮಿಸಿ ತನಿಖೆ ನಡೆಸುತ್ತಿದ್ದಾರೆ.

 

LEAVE A REPLY