ಆರೆಸ್ಸೆಸ್ ಕಾರ್ಯಕರ್ತ ಮನೋಜ್ ಹತ್ಯೆ ಪ್ರಕರಣ ಬೇಸಿದ ಸಿಬಿಐ: ಸಿಪಿಎಂ ನಾಯಕ ಜಯರಾಜನ್ ಸಂಚುಕೋರ  

 ಕೊಚ್ಚಿ: ಕೇರಳದ ಕಣ್ಣೂರು ಜಿಲ್ಲೆಯಲ್ಲಿ ಮೂರು ವರ್ಷಗಳ ಹಿಂದೆ ನಡೆದ ಆರ್ ಎಸ್ ಎಸ್ ಕಾರ್ಯಕರ್ತ ಕಥಿರೂರ್ ಮನೋಜ್ ಅವರ ಬರ್ಬರ ಹತ್ಯೆ ಪ್ರಕರಣದಲ್ಲಿ ‘ತಾತ್ವಿಕ ಸಂಚುಕೋರ’ನಾಗಿ ಸಿಪಿಎಂನ ಪ್ರಭಾವಿ ನಾಯಕ ಪಿ.ಜಯರಾಜನ್  ಎಂಬುದಾಗಿ ಸಿಬಿಐ ಹೇಳಿದ್ದು, ಈತನನ್ನು ಭಯೋತ್ಪಾದನಾ ಕಾಯ್ದೆಯಡಿ ಆರೋಪಿ ಎಂದು ಹೆಸರಿಸಿದೆ.
ತಿರುವನಂತಪುರಂ ಸಿಬಿಐ ಘಟಕದ ವಿಶೇಷ ಅಪರಾಧ ಶಾಖೆಯ ವಿಶೇಷ ತನಿಖಾಕಾರಿ ಹರಿ ಓಂಪ್ರಕಾಶ್ ಅವರು,  ಎರ್ನಾಕುಳಂ ವಿಶೇಷ ನ್ಯಾಯಾಶರ ನ್ಯಾಯಾಲಯದ ಮುಂದೆ ಪೂರಕ ಆರೋಪಪಟ್ಟಿ ಸಲ್ಲಿಸಿದ್ದಾರೆ. ಈ ಪ್ರಕರಣದಲ್ಲಿ ಜಯರಾಜನ್ ಅವರನ್ನು ೨೫ ನೇ ಆರೋಪಿ ಎಂದು ಗುರುತಿಸಲಾಗಿದೆ. ಅತ್ಯಂತ ವ್ಯವಸ್ಥಿತವಾಗಿ ರೂಪಿಸಲಾದ ಆಳ ಮತ್ತು ಸಂಘಟಿತ ಸಂಚಿನ ಮೂಲಕ ಸಿಪಿಎಂ ಈ ಹತ್ಯೆ ನಡೆಸಿದೆ. ಪಕ್ಷದ ಬಲಿಷ್ಠ ಹಾಗೂ ಪ್ರಭಾವಿ ಮುಖಂಡ ಜಯರಾಜನ್ ಇಂತಹ ಸಂಚು ರೂಪಿಸಿದಾತನೆಂದು ಸಿಬಿಐ ತನ್ನ ವರದಿಯಲ್ಲಿ ತಿಳಿಸಿದೆ.
ಕಥಿರೂರು ಮನೋಜ್ ಎಂದೇ ಗುರುತಿಸಲ್ಪಟ್ಟಿದ್ದ ಆರೆಸ್ಸೆಸ್ಸ್ ಕಾರ್ಯಕರ್ತ ಇಳಂತೊಟ್ಟತ್ತಿಲ್ ಮನೋಜ್ ಅವರ ಬರ್ಬರ ಹತ್ಯೆಯನ್ನು ಭಯೋತ್ಪಾದಕ ಕೃತ್ಯವೆಂದು ಬಣ್ಣಿಸಿರುವ ಸಿಬಿಐ, ಜಯರಾಜನ್ ವಿರುದ್ಧ ಕಾನೂನು ಬಾಹಿರ ಚಟುವಟಿಕೆ(ತಡೆ)ಕಾಯ್ದೆ ೧೯೬೭ರಡಿ  ೧೮ ಮತ್ತು ೧೯ನೇ ವಿ ಸೇರಿದಂತೆ ಹಲವು ಕಾಯ್ದೆಗಳಡಿ ಆರೋಪಪಟ್ಟಿ ದಾಖಲಿಸಲಾಗಿದೆ. ಅಲ್ಲದೆ ಐಪಿಸಿ ಕಾಯ್ದೆಯಡಿ ೧೨೦(ಬಿ)ಯಡಿ ಕ್ರಿಮಿನಲ್ ಸಂಚು ರೂಪಿಸಿದ ಪ್ರಕರಣವನ್ನೂ ದಾಖಲಿಸಲಾಗಿದೆ.
ಮನೋಜ್ ಅವರನ್ನು ಅತ್ಯಂತ ಕ್ರೂರ ಹಾಗೂ ಭಯೋತ್ಪಾದಕ ರೀತಿಯಲ್ಲಿ ಪ್ರಥಮ ಆರೋಪಿ ವಿಕ್ರಮನ್ ಹತ್ಯೆ ಮಾಡಿದ್ದು, ವಿಕ್ರಮನ್ ಜೊತೆ ಸಂಚು ರೂಪಿಸಿದ್ದು ಜಯರಾಜನ್ ಎಂದು ಅದು ಹೇಳಿದೆ. ಜಯರಾಜನ್ ಇಂತಹ ಕೊಲೆಗಳಿಗೆ ವಿಕ್ರಮನ್‌ನನ್ನು ಸಾಧನವಾಗಿ ಬಳಸಿಕೊಳ್ಳುತ್ತಿದ್ದು, ಸಂಘಟಿತ ಹತ್ಯೆಗಳು, ಮಾರಕ ಅಸ್ತ್ರಗಳು ಮತ್ತು ಬಾಂಬ್‌ಗಳನ್ನು ಬಳಸುವಲ್ಲಿ ಈತನ ತಂಡ ಸಕ್ರಿಯವಾಗಿದೆ ಎಂದು ವರದಿ ತಿಳಿಸಿದೆ. ಕಣ್ಣೂರಿನಲ್ಲಿ ಆರೆಸ್ಸೆಸ್ ಕಾರ್ಯಕರ್ತರಿಗೆ ಭಯೋತ್ಪಾದಕ ಸಂದೇಶವನ್ನು ರವಾನಿಸುವ ರೀತಿಯಲ್ಲಿ ಈ ಹತ್ಯೆಗೆ ಸಂಚು ರೂಪಿಸಲಾಗಿತ್ತು ಎಂದು ಅದು ವಿವರಿಸಿದೆ.
ಇದೇ ಪ್ರಕರಣದಲ್ಲಿ ಉಳಿದ ಐದು ಆರೋಪಿಗಳೆಂದು ಹೇಳಲಾದವರ ಹೆಸರುಗಳು ಹೀಗಿದೆ- ರಾಜೇಶ್, ಸುನೀಲ್ ಕುಮಾರ್, ಮಹೇಶ್, ಸಜೀಲೇಶ್ ಮತ್ತು ರಾಕೇಶ್, ಈ ಎಲ್ಲರೂ ಅಪರಾಧದ ಪಿತೂರಿ ಮತ್ತು ಇತರೆ ಪ್ರಕರಣಗಳಲ್ಲಿ ಬಂಸಲ್ಪಟ್ಟಿದ್ದಾರೆ.
ಈ ಪ್ರಕರಣದಲ್ಲಿ ಸಿಬಿಐ ಇದಕ್ಕೂ ಮುನ್ನ  ಆರೋಪಪಟ್ಟಿಯನ್ನು ನ್ಯಾಯಾಲಕ್ಕೆ  ಸಲ್ಲಿಸಿತ್ತು, ಅದರಲ್ಲಿ , ೧೯ ಜನರನ್ನು ಆರೋಪಿಗಳಾಗಿ ಮತ್ತು ೨೦೦ ಜನರನ್ನು ಸಾಕ್ಷಿಗಳಾಗಿ ಪಟ್ಟಿ ಮಾಡಿತ್ತು. ೨೦೧೪ ರ ಸೆ. ೧ ರಂದು ಸಿಪಿಎಂ ಗೂಂಡಾಗಳು ಈ ಹತ್ಯೆ ನಡೆಸಿದ್ದರು.

LEAVE A REPLY