ದಾವೂದ್ ಪಾಕ್‌ನ ಕರಾಚಿಯಲ್ಲೇ ಇದ್ದಾನೆ : ಮುಶರಫ್ ಪರೋಕ್ಷವಾಗಿ ಸುಳಿವು

ಇಸ್ಲಮಾಬಾದ್: ಮುಂಬೈ ಸರಣಿ ಬಾಂಬ್ ಸೋಟದ ಆರೋಪಿ ದಾವೂದ್ ಇಬ್ರಾಹಿಂ ಕರಾಚಿಯಲ್ಲಿ ಇರುವ ಬಗ್ಗೆ ಪಾಕಿಸ್ತಾನದ ಮಾಜಿ ಅಧ್ಯಕ್ಷ ಫರ್ವೇಜ್ ಮುಶರಫ್ ಪರೋಕ್ಷವಾಗಿ ಸುಳಿವು ನೀಡಿದ್ದಾರೆ. ಆದರೆ, ಈ ಬಗ್ಗೆ ನಾವೇಕೆ ಭಾರತಕ್ಕೆ ಮಾಹಿತಿ ನೀಡಬೇಕು ಎಂದು ಹೇಳಿದ್ದಾರೆ.
ಭೂಗತ ಪಾತಕಿ ದಾವೂದ್ ಇಬ್ರಾಹಿಂ ಪಾಕಿಸ್ತಾನದಲ್ಲಿಯೇ ಆಶ್ರಯ ಪಡೆದುಕೊಂಡಿದ್ದಾನೆ ಎಂದು ಕೇಂದ್ರ ಗೃಹ ಕಾರ್ಯದರ್ಶಿ ರಾಜೀವ್ ಮೆಹ್ರಿಶಿ ಅವರು ಹೇಳಿಕೆ ನೀಡಿದ ಒಂದು ದಿನದ ಬಳಿಕ ಮುಶರಫ್ ಹೀಗೊಂದು ಸೂಚನೆಯನ್ನು ನೀಡಿದ್ದಾರೆ.
ಪಾಕಿಸ್ತಾನದ ಸುದ್ದಿವಾಹಿನಿಯೊಂದರಲ್ಲಿ  ಮುಶರಫ್ ಮಾತನಾಡುತ್ತಾ ಭಾರತವೂ ಅನೇಕ ಕಾಲಗಳಿಂದಲೂ ಕೂಡ ಪಾಕಿಸ್ತಾನದ ಮೇಲೆ ಆರೋಪವನ್ನು ಹೊರಿಸುತ್ತಿದೆ. ಈಗ್ಯಾಕೆ ನಾವು ಅವರಿಂದ ಉತ್ತಮರೆನಿಸಿಕೊಳ್ಳಬೇಕು. ಅಲ್ಲದೆ, ಯಾಕೆ ಭಾರತಕ್ಕೆ ಸಹಾಯ ಮಾಡಬೇಕು ಎಂದು ಹೇಳಿದ್ದಾರೆ.
ದಾವೂದ್ ಇಬ್ರಾಹಿಂ ಎಲ್ಲಿದ್ದಾರೆ ಎನ್ನುವುದು ತಮಗೆ ತಿಳಿದಿಲ್ಲ. ೧೯೯೩ ಮುಂಬೈ ಸರಣಿ ಬಾಂಬ್ ಸೋಟದ ಆರೋಪಿಯಾದ ಅವರು ಇಲ್ಲಿಯೇ ಎಲ್ಲೋ ಇದ್ದಾರೆ. ಭಾರತವೂ ಮುಸ್ಲಿಮರನ್ನು ಕೊಲ್ಲುತ್ತಿದೆ. ದಾವೂದ್ ಇಬ್ರಾಹಿಂ ಪ್ರತಿಕ್ರಿಯಿಸುತ್ತಿದ್ದಾರೆ ಎಂದು ಹೇಳುವ ಮೂಲಕ ಭಾರತದ ಮೋಸ್ಟ್ ವಾಂಟೆಡ್ ಪಾತಕಿ ಪಾಕಿಸ್ತಾನದಲ್ಲಿಯೇ ಅಡಗಿದ್ದಾನೆ ಎನ್ನುವಂತ ಸ್ಪಷ್ಟವಾದ ಮಾಹಿತಿಯನ್ನು ನೀಡಿದ್ದಾರೆ.
ತನ್ನಲ್ಲಿ ದಾವೂದ್ ಆಶ್ರಯ ಪಡೆದುಕೊಂಡಿರುವುದನ್ನು ಪಾಕಿಸ್ತಾನ ಸರ್ಕಾರ ನಿರಾಕರಿಸುತ್ತಿದೆ. ಆದರೆ, ಕರಾಚಿಯಲ್ಲಿಯೇ ಆತ ವಾಸಿಸುತ್ತಿರುವ ಬಗ್ಗೆ ಭಾರತವು ಹೇಳುತ್ತಿದ್ದು, ಕಳೆದ 10 ವರ್ಷಗಳಿಂದಲೂ ಆತ ಅಲ್ಲಿಯೇ ನೆಲೆಸಿದ್ದು, ಅನೇಕ ಬಾರಿ ಈ ಸಂಬಂಧ ನೋಟಿಸ್‌ಗಳನ್ನು ನೀಡಲಾಗಿದೆ.
ಕಳೆದ ಬುಧವಾರವಷ್ಟೇ ಭಾರತೀಯ ಗೃಹ ಕಾರ್ಯದರ್ಶಿ  ಮಾತನಾಡುತ್ತಾ ಸರ್ಕಾರವೂ ಪಾಕ್‌ನಲ್ಲಿರುವ ದಾವೂದ್‌ನನ್ನು  ಭಾರತಕ್ಕೆ ಕರೆತರುವ ಸಲುವಾಗಿ  ಎಲ್ಲಾ ರೀತಿಯ ಕ್ರಮ ಕೈಗೊಂಡಿದೆ . ಪಾಕಿಸ್ತಾನವು ಭೂಗತ ಪಾತಕಿಗೆ ಆಶ್ರಯ ನೀಡಿದೆ.  ಇದರಿಂದ ಸೂಕ್ತ ಕಾನೂನು ಕ್ರಮಗಳನ್ನು ಎದುರಿಸಬೇಕಾಗುತ್ತದೆ ಎಂದು ಹೇಳಿದ್ದರು.
ಯಾವುದೇ ರೀತಿಯಾದ ಕ್ರಮಗಳನ್ನು ಕೈಗೊಳ್ಳಲು ನಾವೂ ಸಿದ್ಧರಿದ್ದೇವೆ. ಈ ಮೂಲಕ ಆತನನ್ನು ವಾಪಸ್ ಕರೆಸಿಕೊಳ್ಳುವುದು ಮಾತ್ರ ಖಚಿತ.  ಈ ನಿಟ್ಟಿನಲ್ಲಿ ಕಾರ್ಯ ನಡೆಯುತ್ತಿದೆ. ಆದರೆ ಪಾಕ್ ಸರ್ಕಾರವೂ ಅಂತಾರಾಷ್ಟ್ರೀಯ ಕಾನೂನು ಕ್ರಮಗಳನ್ನು ಅನುಸರಣೆ ಮಾಡುತ್ತಿಲ್ಲ ಎಂದು ಹೇಳಿದ್ದರು.
ದಾವೂದ್ ಇಬ್ರಾಹಿಂ 1993ರಲ್ಲಿ ಮುಂಬೈನಲ್ಲಿ ನಡೆದ ಸರಣಿ ಬಾಂಬ್ ಸೋಟದ ಆರೋಪಿಯಾಗಿದ್ದು, ಈ ವೇಳೆ ೨೬೦ ಮಂದಿ ಪ್ರಾಣ ಕಳೆದುಕೊಂಡು ೭೦೦ಕ್ಕೂ ಅಕರು ಗಾಯಗೊಂಡಿದ್ದರು. ಈತ ಪಾಕಿಸ್ತಾನದಲ್ಲಿಯೇ ಕುಳಿತು ಈ ಎಲ್ಲಾ ದುಷ್ಕೃತ್ಯಗಳನ್ನೂ ನಿರ್ವಹಣೆ ಮಾಡುತ್ತಿದ್ದ. ಇದೀಗ ಪಾಕಿಸ್ತಾನವೇ ಆತನಿಗೆ ಆಶ್ರಯ ನೀಡಿರುವ ಬಗ್ಗೆ  ಸುಳಿವನ್ನು ನೀಡಿದೆ.

LEAVE A REPLY