ಬ್ಲೂವೇಲ್‌ಗೆ ತಮಿಳುನಾಡಿನಲ್ಲಿ 2ನೇ ವರ್ಷದ ಬಿಕಾಂ ವಿದ್ಯಾರ್ಥಿ ಆತ್ಮಹತ್ಯೆ

ಮಧುರೈ: ಮಧುರೈನ 2ನೇ ವರ್ಷದ ಬಿಕಾಂ ವಿದ್ಯಾರ್ಥಿಯೋರ್ವ ಬ್ಲೂವೇಲ್ ಗೇಮ್‌ನಿಂದ ಸಾವಿಗೆ ಶರಣಾಗಿದ್ದಾನೆ.
ವಿಘ್ನೇಶ್ ಎಂಬ ೧೯ ವರ್ಷದ ಬಾಲಕ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದು, ಇದು ತಮಿಳುನಾಡಿನಲ್ಲಿ ಬ್ಲೂವೇಲ್ ಆಟದಿಂದಾದ ಮೊದಲ ಬಲಿಯಾಗಿದೆ. ಈತನ ಕೈ ಮೇಲೆ ಬ್ಲೂವೇಲ್‌ನ ಚಿತ್ರ ಬರೆದುಕೊಂಡಿರುವುದು ಹಾಗೂ ಅದರ ಕೆಳಗೆ ಬ್ಲೂವೇಲ್ ಎಂದು ಬರೆದುಕೊಂಡಿರುವುದು ಪತ್ತೆಯಾಗಿದೆ ಎಂದು ಮದುರೈ ಪೊಲೀಸರು ತಿಳಿಸಿದ್ದಾರೆ. ಅಲ್ಲದೆ, ಈತನ ಕೊಠಡಿಯಲ್ಲಿ ಡೆತ್ ನೋಟ್ ಕೂಡ ಪತ್ತೆಯಾಗಿದ್ದು, ಅದರಲ್ಲಿ ಇದನ್ನು ಒಮ್ಮೆ ಪ್ರವೇಶಿಸಿದಲ್ಲಿ ಇದರಿಂದ ಹೊರಬರುವುದು ಅಸಾಧ್ಯ. ಇದೊಂದು ಆಟ ಮಾತ್ರವಲ್ಲ, ಅತ್ಯಂತ ಅಪಾಯಕಾರಿಯಾದುದು ಎಂದು ಬರೆದಿದ್ದಾಗಿ ತಿಳಿಸಿದ್ದಾರೆ. ಈತನ ಬಗ್ಗೆ ತನಿಖೆ ನಡೆಸಿದಾಗ ತಿಳಿದುಬಂದ ಅಂಶವೇನೆಂದರೆ ಈತ ಅತ್ಯಂತ ಹೆಚ್ಚು ಸಮಯವನ್ನು ಫೋನಿನಲ್ಲಿ ಕಳೆಯುತ್ತಿದ್ದ. ಅಲ್ಲದೆ, ನಿಗೂಢ ಸ್ಥಳಗಳಿಗೆ ಭೇಟಿ ನೀಡುತ್ತಿದ್ದ ಎಂದು ಈತನ ಗೆಳೆಯರು ಮಾಹಿತಿ ನೀಡಿದ್ದಾರೆ.

LEAVE A REPLY