ವೀರಶೈವ ಲಿಂಗಾಯತರಿಗೆ 2A ಮೀಸಲು ಸಿಗಲಿ

ಕೊಪ್ಪಳ: ಸ್ವತಂತ್ರ್ಯ ಧರ್ಮ ಸ್ಥಾಪನೆಗಿಂತಲೂ ವೀರಶೈವ ಲಿಂಗಾಯತರಿಗೆ 2A ಮೀಸಲು ಸೌಲಭ್ಯವನ್ನು ನೀಡುವ ಅಗತ್ಯವಿದೆ ಎಂದು ಉಜ್ಜೈನಿ  ಪೀಠ ಸಿದ್ದಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು ಹೇಳಿದರು.

ಅವರು ಕೊಪ್ಪಳ ತಾಲೂಕಿನ ಹಿರೇಸಿಂದೋಗಿಯಲ್ಲಿ ನಡೆದ ಅಡ್ಡ ಪಲ್ಲಕ್ಕಿ ಮಹೋತ್ಸವ ಕಾರ್ಯಕ್ರಮದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.ಲಿಂಗಾಯತ ಧರ್ಮ  ಸ್ಥಾಪನೆ ಎನ್ನುವುದು ಕೆಲವೇ ಕೆಲವರ ಕೂಗು. ಇದರಿಂದ ಏನು ಪ್ರಯೋಜನ ಇಲ್ಲ.ಆದ್ದರಿಂದ ವೀರಶೈವ ಲಿಂಗಾಯತ ಸಮುದಾಯದ ಸಾಮಾನ್ಯರಿಗೆ ಅನುಕೂಲವಾಗುವ ಮೀಸಲು ಸೌಲಭ್ಯವನ್ನು ನೀಡಬೇಕಾಗಿದೆ. ಈಗಿರುವ ಮೀಸಲಾತಿಯಿಂದ ಯಾವುದೇ ಪ್ರಯೋಜನವಿಲ್ಲವಾದ್ದರಿಂದ ಈ ಸಮುದಾಯಕ್ಕೆ 2ಎ ಮೀಸಲು ಸೌಲಭ್ಯವನ್ನು ನೀಡುವ ಅಗತ್ಯವಿದೆ. ಹಾಗೊಂದು ವೇಳೆ 2ಎ ಮೀಸಲು ನೀಡುವುದು ಆಗದಿದ್ದರೆ 2ಎ-3ಬಿಗೆ ಮೀಸಲು ಪ್ರಮಾಣವನ್ನು ಶೇಕಡಾ 12-15 ಕ್ಕೆ ಹೆಚ್ಚಳ ಮಾಡಬೇಕಾಗಿದೆ. ಇದಕ್ಕಾಗಿ ಇನ್ನು ಮುಂದೆ ನಮ್ಮ ಹೊರಾಟ ಎಂದು ಹೇಳಿದರು.

LEAVE A REPLY