ಮಹಾಮಳೆಗೆ ಮುಂಬೈಯಲ್ಲಿ ಧರೆಗುರುಳಿದ ಮೂರು ಅಂತಸ್ತಿನ ಕಟ್ಟಡ

ಮುಂಬೈ: ವಾಣಿಜ್ಯ ನಗರಿ ಮುಂಬೈಯಲ್ಲಿ ಮಳೆ ಗುರುವಾರವೂ ಮುಂದುವರಿದಿದೆ.
ಸತತ ಮಳೆಯ ಹಿನ್ನೆಲೆಯಲ್ಲಿ ಪಾಕ್ಮೋಡಿಯ ರಸ್ತೆಯ ಜೆಜೆ ಜಂಕ್ಷನ್ ಬಳಿಯ ಕಟ್ಟಡ ಕುಸಿದಿದ್ದು ಕಟ್ಟಡದೊಳಗೆ ಹಲವರು ಸಿಲುಕಿಕೊಂಡಿರುವ ಸಾಧ್ಯತೆಯಿದೆ. ಈ ನಡುವೆ ಮಳೆಯಿಂದಾಗಿ ಮೃತಪಟ್ಟವರ ಸಂಖ್ಯೆ ಸಂಖ್ಯೆ 14ಕ್ಕೆ ಏರಿಕೆ.
ಮಹಾನಗರದಾದ್ಯಂತ ಜನಜೀವನ ಅಸ್ತವ್ಯಸ್ತವಾಗಿದ್ದು, ಹಲವೆಡೆಗಳಲ್ಲಿ ಹಾನಿ ನಷ್ಟ ಸಂಭವಿಸಿದೆ. ಪರಿಹಾರ ಕಾರ್ಯಾಚರಣೆಗಾಗಿ ನೌಕಾದಳದ ಸಿಬ್ಬಂದಿಗಳೂ ಆಗಮಿಸಿದ್ದು, ಯಾವುದೇ ದುರಂತ ಸಂಭವಿಸದಂತೆ ಮುನ್ನೆಚ್ಚರಿಕೆ ವಹಿಸಲಾಗಿದೆ.

LEAVE A REPLY