ಭಾರತಕ್ಕೆ ಸ್ವಿಸ್ ಅಧ್ಯಕ್ಷೆ: ಕಪ್ಪುಹಣ ವಾಪಸ್ ಬಗ್ಗೆ ಅಂತಿಮ ತೀರ್ಮಾನ?

ನವದೆಹಲಿ: ಮೂರು ದಿನಗಳ ಪ್ರವಾಸಕ್ಕಾಗಿ ಸ್ವಿಜರ್ಲೆಂಡ್ ಅಧ್ಯಕ್ಷೆ ಡೋರಿಸ್ ಲುಥರ್ಡ್ ಭಾರತಕ್ಕೆ ಭೇಟಿ ನೀಡಿದ್ದು, ಇಂದು ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್, ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿ ಉಭಯ ದೇಶಗಳ ನಡುವಿನ ಬಾಂಧವ್ಯಗಳ ಕುರಿತಂತೆ ಚರ್ಚಿಸಲಿದ್ದಾರೆ.
ಈ ನಡುವೆ ಕೆಲವಾರು ಒಡಂಬಡಿಕೆಗಳಿಗೆ ಸಹಿ ಬೀಳುವ ಸಾಧ್ಯತೆಗಳಿದ್ದು, ಸ್ವಿಸ್ ಬ್ಯಾಂಕ್‌ಗಳಲ್ಲಿರುವ ಭಾರತೀಯ ಕಪ್ಪುಹಣ ಕುರಿತಾದ ಅಂಶವೂ ಚರ್ಚೆಗೆ ಬರುವ ನಿರೀಕ್ಷೆಯಿದೆ. ಸ್ವಿಸ್ ಅಧ್ಯಕ್ಷೆ ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಅವರನ್ನೂ ಸ್ವಿಸ್ ಅಧ್ಯಕ್ಷರು ಭೇಟಿಯಾಗಲಿದ್ದು, ಈ ಭೇಟಿ ಕುತೂಹಲ ಕೆರಳಿಸಿದೆ.
ಪರಮಾಣು ಶಸ್ತ್ರಾಸ್ತ್ರ ದೇಶಗಳ ಒಕ್ಕೂಟ ಅಧ್ಯಕ್ಷರೂ ಆಗಿರುವ ಲುಥರ್ಡ್ ಅವರ ಈ ಬಾರಿಯ ಭಾರತ ಭೇಟಿ ಅತ್ಯಂತ ಮಹತ್ವದ್ದು ಎಂದು ವಿಶ್ಲೇಷಿಸಲಾಗಿದೆ. ಈ ಹಿಂದೆ 2016ರ ಜೂನ್ ತಿಂಗಳಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಸ್ವಿಜರ್ಲೆಂಡ್ ಪ್ರವಾಸ ಕೈಗೊಂಡಿದ್ದ ಸಂದರ್ಭ ಸ್ವಿಸ್ ಬ್ಯಾಂಕ್ ಗಳಲ್ಲಿರುವ ಭಾರತೀಯರ ಕಪ್ಪು ಹಣದ ಹಸ್ತಾಂತರದ ಬಗ್ಗೆ ಚರ್ಚೆ ನಡೆದಿತ್ತು. ಅದಾದ ಬಳಿಕ ಅಲ್ಲಿನ ಬ್ಯಾಂಕುಗಳಲ್ಲಿರುವ ಕಪ್ಪು ಹಣದ ವರ್ಗಾವಣೆ ಬಗ್ಗೆ ಒಲವು ತೋರಿತ್ತು ಎಂಬುದು ಗಮನಾರ್ಹ ಅಂಶ.

LEAVE A REPLY