ಸೇನೆ ಬಲಿಷ್ಟಗೊಳಿಸುತ್ತ ಕೇಂದ್ರ ಸರಕಾರದ ಚಿತ್ತ: ಶೀಘ್ರ 57 ಸಾವಿರ ಸಿಬ್ಬಂದಿ ನೇಮಕ

ನವದೆಹಲಿ: ನರೇಂದ್ರ ಮೋದಿ ಸಾರಥ್ಯದ ಕೇಂದ್ರ ಸರಕಾರವು ಭಾರತೀಯ ಸೇನೆ ಬಲಿಷ್ಟಗೊಳಿಸುತ್ತ ಉತ್ಸಾಹ ತೋರಿದ್ದು, ಮಾಜಿ ಲೆಫ್ಟೆನೆಂಟ್ ಜನರಲ್ ಡಿ.ಬಿ. ಶೇಕಾತ್ಕರ್ ಸಮಿತಿ 2016ರ ಡಿಸೆಂಬರ್ ತಿಂಗಳಲ್ಲಿ ಮಾಡಿರುವ ಶಿಫಾರಸು ಜಾರಿಗೆ ತರಲು ಗಂಭೀರ ಚಿಂತನೆ ನಡೆಸಿದೆ.
ಈ ಮೂಲಕ 99 ಶಿಫಾರಸುಗಳ ಪೈಕಿ 65 ಶಿಫಾರಸುಗಳಿಗೆ ಕೇಂದ್ರ ರಕ್ಷಣಾ ಸಚಿವ ಅರುಣ್ ಜೇಟ್ಲಿ ಸಮ್ಮತಿ ಸೂಚಿಸಿದ್ದಾರೆ ಎಂದು ತಿಳಿದು ಬಂದಿದೆ.
ಇದರ ಅಂಗವಾಗಿ ಮೊದಲ ಹಂತದಲ್ಲಿ ಆಫೀಸರ್ ಹುದ್ದೆಯಿಂದ ಹಿಡಿದು ಕೆಳಹಂತದ ವರೆಗಿನ 57 ಸಾವಿರ ಹುದ್ದೆಗಳನ್ನು ಹಂತಹಂತವಾಗಿ ಭರ್ತಿ ಮಾಡಲು ಕೇಂದ್ರ ಸರಕಾರ ಮುಂದಾಗಿದೆ. ಆಯುಧ ಗೋದಾಮು, ವಾಹನ ಡಿಪೋ ವಿಭಾಗಳಲ್ಲೂ ಸಿಬ್ಬಂದಿ ನೇಮಕಾತಿಗೆ ಅನುಮತಿ ನೀಡಲಾಗಿದ್ದು, ಸೇನೆಯಲ್ಲಿನ ದುರಸ್ತಿ ವಿಭಾಗವನ್ನು ಇನ್ನಷ್ಟು ಬಲಿಷ್ಠಗೊಳಿಸಲು ಚಿಂತಿಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.

LEAVE A REPLY