ಪುತ್ತೂರು ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷರಾಗಿ ಮಹೇಶ್ ಪುಚ್ಚಪ್ಪಾಡಿ ಆಯ್ಕೆ

ಪುತ್ತೂರು: ತಾಲೂಕು ಪತ್ರಕರ್ತರ ಸಂಘದ ನೂತನ ಅಧ್ಯಕ್ಷರಾಗಿ ಹೊಸದಿಗಂತ ಪತ್ರಿಕೆಯ ವರದಿಗಾರ ಮಹೇಶ್ ಪುಚ್ಚಪ್ಪಾಡಿ ಹಾಗೂ ಕಾರ್ಯದರ್ಶಿಯಾಗಿ ಉದಯವಾಣಿ ಪತ್ರಿಕೆಯ ವರದಿಗಾರ ಕಿರಣ್ ಪ್ರಸಾದ್ ಕುಂಡಡ್ಕ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಖಜಾಂಜಿಯಾಗಿ ಕೃಷ್ಣಾ ಸ್ಟುಡಿಯೋದ ಹರೀಶ್ ಪಿ, ಉಪಾಧ್ಯಕ್ಷರಾಗಿ ವಿಜಯಕರ್ನಾಟಕ ಪತ್ರಿಕೆಯ ವರದಿಗಾರ ಸುಧಾಕರ ಸುವರ್ಣ ತಿಂಗಳಾಡಿ ಹಾಗೂ ವಿ೪ ನ್ಯೂಸ್ ವರದಿಗಾರ ಅನೀಶ್ ಕುಮಾರ್ ಮರೀಲ್, ಜೊತೆ ಕಾರ್ಯದರ್ಶಿಯಾಗಿ ವಿಜಯವಾಣಿ ಪತ್ರಿಕೆಯ ವರದಿಗಾರ ಶ್ರವಣ್ ಕುಮಾರ್ ನಾಳ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ತಾಲೂಕು ಪತ್ರಕರ್ತರ ಸಂಘದ ಮಹಾಸಭೆಯು ಬುಧವಾರ ಪತ್ರಿಕಾ ಭವನದಲ್ಲಿ ಸಂಘದ ಅಧ್ಯಕ್ಷ ಸಂತೋಷ್ ಕುಮಾರ್ ಶಾಂತಿನಗರ ಅಧ್ಯಕ್ಷತೆಯಲ್ಲಿ ನಡೆಯಿತು. ಸಂಘದ ವಾರ್ಷಿಕ ವರದಿಯನ್ನು ಯು.ಎಲ್.ಉದಯ ಕುಮಾರ್ ವಾಚಿಸಿದರು. ವೇದಿಕೆಯಲ್ಲಿ ಸಂಘದ ಕೋಶಾಧಿಕಾರಿ ಹರೀಶ್, ಉಪಾಧ್ಯಕ್ಷ ಉಮಾಪ್ರಸಾದ್ ನಡುಬೈಲು , ಜೊತೆಕಾರ್ಯದರ್ಶಿ ನಝೀರ್ ಕೊಯಿಲ ಉಪಸ್ಥಿತರಿದ್ದರು.
ಯು.ಎಲ್.ಉದಯ ಕುಮಾರ್ ಸ್ವಾಗತಿಸಿ ಶ್ರವಣ್ ಕುಮಾರ್ ನಾಳ ವಂದಿಸಿದರು.

LEAVE A REPLY