ಪಾನ್ ಮತ್ತು ಆಧಾರ್ ಲಿಂಕ್ ಪ್ರಕ್ರಿಯೆ: ಗಡುವು ವಿಸ್ತರಣೆ ನಿರೀಕ್ಷೆ

ಹೊಸದಿಲ್ಲಿ: ಆಧಾರ್ ನೋಂದಣಿಗೆ ನೀಡಲಾಗಿದ್ದ ಸೆ.30ರ ಗಡುವನ್ನು ಡಿ.31ರವರೆಗೂ ವಿಸ್ತರಿಸುವುದಾಗಿ ಸರ್ಕಾರ ತಿಳಿಸಿದೆ.
ಇದರಿಂದಾಗಿ ತೆರಿಗೆ ರಿಟರ್ನ್ಸ್ ಸಲ್ಲಿಕೆಗೆ ಅಗತ್ಯವಾಗಿರುವ ಪಾನ್ ಮತ್ತು ಆಧಾರ್ ಲಿಂಕ್ ಪ್ರಕ್ರಿಯೆಯ ಕೊನೆಯ ದಿನವೂ ಗಡುವು ವಿಸ್ತರಿಸುವ ನಿರೀಕ್ಷೆಯಿದೆ. ವಿತ್ತ ಸಚಿವಾಲಯ ಆಧಾರ್-ಪಾನ್ ಲಿಂಕ್ ಗಡುವು ವಿಸ್ತರಣೆ ಮಾಡುವುದೋ ಇಲ್ಲವೋ ಎಂಬುದರ ಬಗ್ಗೆ ಇಂದು ಅಕೃತ ಘೋಷಣೆ ಮಾಡಲಿದೆ ಎಂದು ಮೂಲಗಳು ತಿಳಿಸಿವೆ. ಆಧಾರ್ ಮತ್ತು ಪಾನ್ ಸಂಖ್ಯೆ ಸಂಪರ್ಕಿಸದೆ ತೆರಿಗೆ ರಿಟರ್ನ್ಸ್ ಸಲ್ಲಿಕೆ ಪ್ರಕ್ರಿಯೆ ಪೂರ್ಣಗೊಳ್ಳುವುದಿಲ್ಲ.

LEAVE A REPLY