ಮುಂದುವರಿದ ‘ಮಹಾ’ ಮಳೆ: ಮುಂಬೈನಲ್ಲಿ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ

ಮುಂಬೈ: ವಾಣಿಜ್ಯ ನಗರಿ ಮುಂಬೈನಲ್ಲಿ ಬುಧವಾರವೂ ಧಾರಾಕಾರ ಮಳೆ ಮುಂದುವರಿದಿದೆ.
ಭಾರೀ ಗಾಳಿ, ಮಳೆಯ ಹಿನ್ನೆಲೆಯಲ್ಲಿ ಮುಂಬೈ ನಗರದಲ್ಲಿನ ಎಲ್ಲಾ ಶಾಲಾ-ಕಾಲೇಜುಗಳಿಗೆ ಇಂದು ರಜೆ ಘೋಷಣೆ ಮಾಡಲಾಗಿದೆ. ಕಳೆದ ಆರು ಗಂಟೆಗಳಲ್ಲಿ 100 ಮಿ.ಮೀ. ಮಳೆ ಸುರಿದಿದ್ದು, ವರುಣಾರ್ಭಟಕ್ಕೆ ವಾಣಿಜ್ಯ ನಗರಿ ತತ್ತರಿಸಿ ಹೋಗಿದೆ.
ಸುಳಿಗಾಳಿ ಭೀತಿ!
ಧಾರಾಕಾರ ಮಳೆಯೊಂದಿಗೆ ಸುಳಿಗಾಳಿ ಕೂಡಾ ಕಾಣಿಸಿಕೊಂಡಿದ್ದು, ಇಂದು ಮಧ್ಯಾಹ್ನದ ವೇಳೆಗೆ ಸುಳಿಗಾಳಿ ಗುಜರಾತ್ ಕಡೆ ಸಾಗಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ಜೊತೆಗೆ ಈ ಬಗ್ಗೆ ಎಚ್ಚರ ವಹಿಸಲೂ ಸೂಚಿಸಲಾಗಿದೆ. ತುರ್ತು ಕೆಲಸಗಳಿಲ್ಲದಿದ್ದಲ್ಲಿ ಮನೆಬಿಟ್ಟು ಹೊರಬಾರದಂತೆ ನಾಗರಿಕರಿಗೆ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಮನವಿ ಮಾಡಿದ್ದಾರೆ.
ಯಾವುದೇ ಪರಿಸ್ಥಿತಿ ಎದುರಿಸಲು ಆಡಳಿತ ಸಜ್ಜಾಗಿದ್ದು, ಈಗಾಲೇ ಸಹಾಯವಾಣಿ ಆರಂಭಿಸಲಾಗಿದ್ದು, ಪರಿಸ್ಥಿತಿಯ ಅವಲೋಕನ ಸಡೆಸಲು ಇಂದು ಮುಖ್ಯಮಂತ್ರಿಗಳು ಅಧಿಕಾರಿಗಳ ಸಭೆ ಕರೆದಿದ್ದಾರೆ.

LEAVE A REPLY