ಬಾಬಾ ಪುತ್ರ ಜಸ್ಮೀತ್ ಸಿಂಗ್ ಡೇರಾ ಸಚ್ಚಾ ಸೌಧಾದ ನೂತನ ಮುಖ್ಯಸ್ಥ

ಡೇರಾ ಸಚ್ಚಾ ಸೌಧಾದ ನೂತನ ಮುಖ್ಯಸ್ಥನನ್ನಾಗಿ ಬಾಬಾ ರಾಮ್ ರಹೀಮ್ ಸಿಂಗ್ ಪುತ್ರ ಜಸ್ಮೀತ್ ಸಿಂಗ್‌ನನ್ನು ನೇಮಿಸಲಾಗಿದೆ.
ಮೂವತ್ತೊಂದು ವರ್ಷದ ಜಸ್ಮೀತ್ ಸಿಂಗ್ ಮಂಗಳವಾರ ಡೇರಾ ಸಚ್ಛಾ ಸೌಧದ ಆಡಳಿತಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡಿದ್ದಾರೆ.
ಅತ್ಯಾಚಾರ ಪ್ರಕರಣದಲ್ಲಿ 20 ವರ್ಷ ಜೈಲುವಾಸ ಶಿಕ್ಷೆಗೊಳಗಾದ ಬಾಬಾ ರಾಮ್ ರಹೀಮ್ ಸಿಂಗ್ ಬಳಿಕ ಡೇರಾದ ನೂತನ ಮುಖ್ಯಸ್ಥ ಯಾರಾಗಲಿದ್ದಾರೆ ಎಂಬ ಕುತೂಹಲ ಕಾಡಿತ್ತು. ಈ ಕುತೂಹಲಕ್ಕೆ ಮಂಗಳವಾರ ತೆರೆಬಿದ್ದಿದ್ದು, ನೂತನ ಮುಖ್ಯಸ್ಥನನ್ನಾಗಿ ಬಾಬಾ ರಾಮ್ ರಹೀಮ್ ಸಿಂಗ್ ಪುತ್ರ ಜಸ್ಮೀತ್ ಸಿಂಗ್ ನನ್ನು ನೇಮಿಸಲಾಗಿದೆ.

LEAVE A REPLY