ಅಳಿವೆ ಬಾಗಿಲಿನಲ್ಲಿ ಬೋಟ್ ದುರಂತ: ಒಂಭತ್ತು ಮೀನುಗಾರರು ಪಾರು

ಮಂಗಳೂರು:ಮೀನುಗಾರಿಕೆ ತೆರಳಿದ್ದ ಟ್ರಾಲ್‌ಬೋಟೊಂದು ಮಂಗಳೂರು ಸಮೀಪದ ಅಳಿವೆ ಬಾಗಿಲು ಸಮೀಪ ಮರಳು ದಿಣ್ಣೆಗೆ ಡಿಕ್ಕಿ ಹೊಡೆದು ಅವಘಡಕ್ಕೀಡಾಗಿದ್ದು, ಈ ಸಂದರ್ಭ ಬೋಟ್‌ನಲ್ಲಿದ್ದ 9 ಮಂದಿ ಪಾರಾಗಿದ್ದಾರೆ.
ಮಂಗಳವಾರ ಈ ಅವಘಡ ನಡೆದಿದ್ದು, ತೋಟ ಬೆಂಗರೆ ಸಮೀಪ ದಡ ಸೇರಿದೆ. ಬೋಟ್‌ನ ಫ್ಯಾನಿಗೆ ಹಗ್ಗ ತಾಗಿದ ಕಾರಣ ತುಂಡಾಗಿ ಸೀಮಾಸ್ಟರ್ ಬೋಟ್ ಅವಘಡಕ್ಕೀಡಾಗಿ ದಡದತ್ತ ಬಂದಿದೆ. ಕಡಲು ಬಿರುಸುಗೊಂಡ ಕಾರಣ ಬೋಟನ್ನು ಸಂಪೂರ್ಣ ಕಡಲಿನಿಂದ ಮೇಲೆ ಎಳೆಯಲು ಸಾಧ್ಯವಾಗಿಲ್ಲ ಎಂದು ತಿಳಿದು ಬಂದಿದೆ. ಅವಘಡಕ್ಕೀಡಾದ ಬೋಟು ಮೌಲ್ಯ 63 ಲಕ್ಷ ರೂ. ಅಂದಾಜಿಸಲಾಗಿದೆ. ಪಣಂಬೂರು ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ.

LEAVE A REPLY