ಮಲೆಯಾಳಂ ನಟ ದಿಲೀಪ್‌ ಜಾಮೀನು ಅರ್ಜಿ 2ನೇ ಬಾರಿಯೂ ವಜಾ

ಕೊಚ್ಚಿ: ಮಲೆಯಾಳ ಸೇರಿದಂತೆ ಬಹಭಾಷಾ ಯುವ ನಾಯಕಿ ನಟಿಯನ್ನು ಅಪಮಾನಗೈಯ್ಯಲು ಯತ್ನಿಸಿದ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ಖ್ಯಾತ ಮಲೆಯಾಳಂ ಸಿನಿಮಾ ನಾಯಕ ನಟ ದಿಲೀಪ್‌ರ ಜಾಮೀನು ಅರ್ಜಿಯನ್ನು ನ್ಯಾಯಾಲಯವು 2ನೇ ಬಾರಿಯೂ ತಿರಸ್ಕರಿಸಿದೆ.
ಆರೋಪಿಗಳಿಗೆ ಜಾಮೀನು ಮಂಜೂರುಗೊಳಿಸಿದರೆ ಸಾಕ್ಷಿಗಳ ಮೇಲೆ ಪ್ರಭಾವ ಬೀರುವ ಸಾಧ್ಯತೆ ಇದೆಯೆನ್ನುವ ಸರಕಾರಿ ವಕೀಲರ ವಾದವನ್ನು ಪುರಸ್ಕರಿಸಿದ ನ್ಯಾಯಾಲಯವು 2ನೇ ಬಾರಿಯೂ ಜಾಮೀನು ನೀಡಲು ನಿರಾಕರಿಸಿದೆ.
ಈ ಮೊದಲು ಮ್ಯಾಜಿಸ್ಟ್ರೇಟರ ನ್ಯಾಯಾಲಯ ಮತ್ತು ಹೈಕೋರ್ಟು ಜಾಮೀನು ನಿರಾಕರಿಸಿರುವುದರಿಂದ ಈ ಬಾರಿ ಬಲವಾದ ವಾದಗಳನ್ನು ಮುಂದಿಟ್ಟುಕೊಂಡು ಜಾಮೀನಿಗೆ ಅರ್ಜಿಯನ್ನು ಸಲ್ಲಿಸಲಾಗಿತ್ತು. ತನ್ನನ್ನು ಪೊಲೀಸರು ವಿನಾ ಕಾರಣ ಶಿಲುಬೆಗೇರಿಸುತ್ತಿರುವುದಾಗಿ ದಿಲೀಪ್ ಅರ್ಜಿಯಲ್ಲಿ ಆರೋಪಿಸಿದ್ದರು. ಆದರೆ ದಿಲೀಪ್‌ರ ವಿರುದ್ಧ ಸಾಕ್ಷಿಗಳ ರಹಸ್ಯ ಹೇಳಿಕೆಗಳನ್ನು ದಾಖಲಿಸಲಾಗಿದೆ. ಆದುದರಿಂದ ಮೇಲ್ನೋಟದಲ್ಲಿಯೇ ದಿಲೀಪ್‌ರ ವಿರುದ್ಧದ ಆರೋಪದಲ್ಲಿ ಹುರುಳಿರುವುದಾಗಿ ತಿಳಿಸಿದ ನ್ಯಾಯಾಲಯವು ಜಾಮೀನು ನೀಡಲು ನಿರಾಕರಿಸಿದೆ.
ತನ್ನ ವಿರುದ್ಧ ದಾಖಲಾಗಿರುವ ಆರೋಪವು ಪೊಲೀಸರು ಹೆಣೆದ ಕಟ್ಟುಕತೆಯಾಗಿದೆ. ತನ್ನ ವಿರುದ್ಧ ಭಾರೀ ದೊಡ್ಡ ಮಟ್ಟಿನ ಸಂಚು ನಡೆದಿದೆ. ದಿಲೀಪರ ವಾದವನ್ನು ನ್ಯಾಯಾಲಯವು ಅಂಗೀಕರಿಸಲಿಲ್ಲ.
ಈ ಹಿಂದೆ ಮೆಜಿಸ್ಟ್ರೀಯಲ್ ನ್ಯಾಯಾಲಯ ಈತ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ತಿರಸ್ಕರಿಸಿತ್ತು.

LEAVE A REPLY